Wednesday, January 22, 2025

ಪಾಕಿಸ್ತಾನ ಧ್ವಜ ಸ್ಟೇಟಸ್ ಗೆ ಹಾಕಿದ ಯುವಕ ಅರೆಸ್ಟ್​​!

ಹಾವೇರಿ : ಪಾಕಿಸ್ಥಾನ ಧ್ವಜವನ್ನು ಮೊಬೈಲ್ ಸ್ಟೇಟಸ್ ಹಾಕಿಕೊಂಡ ಯುವಕನನ್ನು ದೇಶದ್ರೋಹ ಆರೋಪದ ಮೇರೆಗೆ ಹಾವೇರಿ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.

ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದ ರಾಜೇಸಾಬ್‌ ಮಹ್ಮದ್ ಸಾಬ್ ಎಂಬ ಯುವಕ‌ ತನ್ನ ಮೊಬೈಲ್​​ನಲ್ಲಿ ಪಾಕ್ ಧ್ವಜದ ಸ್ಟೇಟಸ್ ಹಾಕಿಕೊಂಡಿದ್ದ. ಅಲ್ಲದೇ ಮಸೀದಿಯಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮಕ್ಕೆ ಪಾಕಿಸ್ಥಾನ ಬಾಂಧವರಿಗೆ ಸ್ವಾಗತ ಕೋರಿದ್ದ. ಈ ಬೆಳವಣಿಗೆಯನ್ನೂ ಹಿಂದೂ ಸಂಘಟನೆಯ ಕಾರ್ಯಕರ್ತ ಗುಡಸಲಿ ಅವರು ಖಂಡಿಸಿ ಸ್ಥಳೀಯ ಠಾಣೆಗೆ ದೂರು ನೀಡಿದ್ದರು.

ಇದನ್ನೂ ಓದಿ: ಕಾಂತಾರ ಸಿನಿಮಾದ ಫಸ್ಟ್ ಲುಕ್ ನ.27ಕ್ಕೆ ರಿಲೀಸ್​!

ತನಿಖೆ ನಡೆಸಿ ದೇಶದ್ರೋಹದ ಆರೋಪದ ಮೇರೆಗೆ ಬಂಧಿಸಬೇಕೆಂದು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಕುಷ್ಟಗಿ ಸಿಪಿಐ ಯಶವಂತ ಬಿಸನಳ್ಳಿ ಅವರು, ಯುವಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತಾವರಗೇರಾ ಪೊಲೀಸ್ ಠಾಣೆಯೆಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES