ತಿರುಪತಿ: ಪ್ರಧಾನಿ ನರೇಂದ್ರ ಮೋದಿಯವರು ನ.27 ರಂದು ವಿಶ್ವವಿಖ್ಯಾತ ತಿರುಮಲ ವೆಂಕಟೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಲಿದ್ದಾರೆ.
ಪ್ರಧಾನಿ ಮೋದಿ ನ.26 ರಾತ್ರಿ ತಿರುಪತಿಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನ.27 ರಂದು ಬೆಳಗ್ಗೆ 8 ಗಂಟೆಗೆ ತಿರುಪತಿಯ ಭಗವಾನ್ ಬಾಲಾಜಿಯ ಮಂದಿರದಲ್ಲಿ ಪೂಜೆ ಸಲ್ಲಿಸಲಿದ್ದಾರೆ. ಈ ವೇಳೆ ಪ್ರಧಾನಿ ಜೊತೆಗೆ ಆಂಧ್ರಪ್ರದೇಶದ ಮುಖ್ಯಮಂತ್ರಿ ವೈ.ಎಸ್. ಜಗನ್‌ಮೋಹನ್ ರೆಡ್ಡಿ ಮತ್ತು ರಾಜ್ಯ ಸಚಿವರು ಹಾಗೂ ಸಂಸದರು ಪೂಜೆಯಲ್ಲಿ ಭಾಗವಹಿಸಲಿದ್ದಾರೆ.
ಇದನ್ನೂ ಓದಿ: ಪಾಕಿಸ್ತಾನ ಧ್ವಜ ಸ್ಟೇಟಸ್ ಗೆ ಹಾಕಿದ ಯುವಕ ಅರೆಸ್ಟ್!
ಪ್ರಧಾನಿ ಭೇಟಿ ಹಿನ್ನಲೆ ದೇವಸ್ಥಾನದಲ್ಲಿ ನ.27ರಂದು ವಿಐಪಿ ದರ್ಶನವನ್ನು ರದ್ದುಗೊಳಿಸಲಾಗಿದೆ ಎಂದು TTD ಮೂಲಗಳು ತಿಳಿಸಿವೆ. ಮೊದಿ ಭೇಟಿಗಾಗಿ ಈಗಾಗಲೇ ಸಿದ್ಧತೆಗಳು ಆರಂಭವಾಗಿವೆ.