Wednesday, January 22, 2025

ಪ್ರವಾಸಿಗರ ಜೀಪ್​​​​ ಅಟ್ಟಾಡಿಸಿದ ಕಾಡಾನೆಗಳು!

ಚಾಮರಾಜನಗರ: ಸಫಾರಿಗೆ ತೆರಳಿದ್ದ ಪ್ರವಾಸಿಗರ ಜೀಪನ್ನು ಕಾಡಾನೆಗಳು ಅಟ್ಟಾಡಿಸಿದ ಘಟನೆ ಚಾಮರಾಜನಗರದ ಬಂಡೀಪುರ ಅರಣ್ಯದಲ್ಲಿ ನಡೆದಿದೆ.

ಇಂದು ಬೆಳಗ್ಗೆ ಪ್ರವಾಸಿಗರು ಸಫಾರಿಗೆ ತೆರಳಿದ್ದ ವೇಳೆಯಲ್ಲಿ ಮರಿ ಜತೆಯಲ್ಲಿದ್ದ ಕಾಡಾನೆಯೊಂದು ರೊಚ್ಚಿಗೆದ್ದು, ಜೀಪ್​ ಮೇಲೆ ಧಾಳಿಗೆ ಮುಂದಾಗಿದೆ. ಪರಿಸ್ಥಿತಿಯನ್ನು ಅರಿತ ಜೀಪ್ ಚಾಲಕ ಜೀಪನ್ನು ವೇಗವಾಗಿ ಚಾಲನೆ ಮಾಡಿ ಅಲ್ಲಿಂದ ಮುಂದೆ ಬಂದಿದ್ದಾರೆ. ಆದರೂ ಆನೆ ಹಾಗೂ ಆನೆ ಮರಿ ಒಂದಷ್ಟು ದೂರ ಜೀಪನ್ನು ಹಿಂಬಾಲಿಸಿಕೊಂಡು ಬಂದಿವೆ.

ಇದನ್ನೂ ಓದಿ: ತೇಜಸ್‌ ಯುದ್ಧ ವಿಮಾನದಲ್ಲಿ ಹಾರಾಡಿದ ಪ್ರಧಾನಿ ನರೇಂದ್ರ ಮೋದಿ

ದಿಢೀರ್ ಆನೆ ಧಾಳಿಯಿಂದ ಪ್ರವಾಸಿಗರು ಒಂದಷ್ಟು ಸಮಯ ಆತಂಕಕ್ಕೆ ಒಳಗಾಗಿದ್ದರು. ಸಫಾರಿ ಜೀಪ್​ ನಲ್ಲಿದ್ದ ಪ್ರವಾಸಿಗರಿಂದ ತನ್ನ ಮರಿಗೆ ತೊಂದರೆಯಾಗುತ್ತದೆ ಎಂಬ ಕಾರಣದಿಂದ ಆನೆ ಆ ರೀತಿ ವರ್ತಿಸಿದೆ ಎಂದು ಅರಣ್ಯಾಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ.

RELATED ARTICLES

Related Articles

TRENDING ARTICLES