Monday, December 23, 2024

NEP ವಿರೋಧಕ್ಕೆ ಸಿ.ಟಿ ರವಿ ಖಂಡನೆ!

ಬೆಂಗಳೂರು: ರಾಜ್ಯ ಸರ್ಕಾರದ NEP ವಿರೋಧಕ್ಕೆ ಬಿಜೆಪಿ ನಾಯಕ ಸಿ.ಟಿ‌. ರವಿ ಖಂಡನೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಶಿಕ್ಷಕರ ಜೊತೆ ಸಂವಾದ ನಡೆಸಿ, ನಿರಂತರ 2 ಲಕ್ಷ ಮಂದಿ ಜೊತೆ ಚರ್ಚಿಸಿ ಶಿಕ್ಷಣದ ಬಗ್ಗೆ ಕರಡು‌ ಹೊರಡಿಸ್ತಾರೆ. ನಂತರ ಸಾರ್ವಜನಿಕ ವಲಯದಲ್ಲಿ ‌ಚರ್ಚೆಗೆ ಬಿಡ್ತಾರೆ. ಈ ಹೊಸ ಶಿಕ್ಷಣ ನೀತಿ‌ ಭಾರತವನ್ನ ಕಟ್ಟಬೇಕು. ಯಾವುದು ಸಮಸ್ಯೆಗಳಿವೆ ಅದಕ್ಕೆ ಶಿಕ್ಷಣದ ಮೂಲಕ ಉತ್ತರ ಕೊಡಬೇಕು. NEP ಅಂದ್ರೆ‌ ಪಠ್ಯ ಪುಸ್ತಕ ಅಲ್ಲ. ಹಿಂದೆ ಕರ್ನಾಟಕ ಸರ್ಕಾರ ಸಿಎಂ ಸಿದ್ದರಾಮಯ್ಯ ಅವಧಿಯಲ್ಲಿ ಅವರೇ ಒಪ್ಪಿಗೆ ನೀಡಿದ್ದರು. ಈಗ ವಿರೋಧಿ ಮಾಡ್ತಿದ್ದಾರೆ.

ಇದನ್ನೂ ಓದಿ: ಡಿಕಶಿ ವಿರುದ್ಧದ ಸಿಬಿಐ ತನಿಖೆ ಹಿಂಪಡೆಯುವುದು ದುರುದ್ದೇಶಪೂರಿತ: ಮುಖ್ಯಮಂತ್ರಿ ಚಂದ್ರು

ಹಾಗಿದ್ರೆ, NEP ವಿರೋಧಕ್ಕೆ ಕಾರಣವೇನು? ಮಾತೃಭಾಷೆಯಲ್ಲಿ ಶಿಕ್ಷಣ ಕೊಡೋದಕ್ಕೆ ನಿಮ್ಮ ವಿರೋಧ‌ ಇದೆಯಾ? ಭಾಷ ಜಗಳ ಬಯಸುತ್ತಿದ್ದೀರಾ? ಕೌಶಲ್ಯಾಧಾರಿತ‌ ಪಠ್ಯ ಅಳವಡಿಸೋದಕ್ಕೆ‌ ನಿಮ್ಮ ವಿರೋಧ ಇದೆಯಾ? ಮೆಕಾಲೆ‌ ಬಗ್ಗೆಯ ಮೋಹದಿಂದ ಭಾರತೀಯ ಶಿಕ್ಷಣಕ್ಕೆ‌ ವಿರೋಧ ಇದೆಯಾ ಎಂದು ಪ್ರಶ್ನಿಸಿದರು.

RELATED ARTICLES

Related Articles

TRENDING ARTICLES