Wednesday, January 22, 2025

ಸಿದ್ದರಾಮಯ್ಯ ಇದರಲ್ಲಿ ಪಾಲುದಾರ ಆಗಲು ಹೊರಟಿದ್ದಾರೆ : ಯಡಿಯೂರಪ್ಪ ಗುಡುಗು

ಬೆಂಗಳೂರು : ಡಿ.ಕೆ. ಶಿವಕುಮಾರ್ ರಕ್ಷಣೆ ಮಾಡೋಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೀಗೆ ಮಾಡಿದ್ದಾರೆ. ರಾಜ್ಯದ ಜನತೆಗೆ ದ್ರೋಹ ಮಾಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಡಾ.ಬಿ.ಎಸ್. ಯಡಿಯೂರಪ್ಪ ಗುಡುಗಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಡಿ ಹಾಗೂ ಸಿಬಿಐ ಪತ್ರ ಬರೆದ ಮೇಲೆಯೇ ನಾವು ಸಿಬಿಐ ತನಿಖೆಗೆ ನಾವು ರೆಫರ್ ಮಾಡಿದ್ದೇವೆ. ಸರ್ಕಾರದ ಮುಖ್ಯ ಕಾರ್ಯದರ್ಶಿ ಪತ್ರ ಬರೆದಿದ್ದರು. ಬಳಿಕ ನಾವು ಸಿಬಿಐಗೆ ರೆಫರ್ ಮಾಡಿದ್ವಿ ಎಂದು ಹೇಳಿದ್ದಾರೆ.

ನಾವು ಅಡ್ವೊಕೇಟ್ ಜನರಲ್ ಅಭಿಪ್ರಾಯ ಪಡೆದೇ ತನಿಖೆಗೆ ನೀಡಿದ್ದೇವೆ. ಸಿದ್ದರಾಮಯ್ಯ ನಿಮ್ಮ ನಿಲುವು ಒಪ್ಪಲ್ಲ, ಇದು ಅಕ್ಷಮ್ಯ ಅಪರಾಧ. ನ್ಯಾಯಾಲಯ ಏನು ತೀರ್ಮಾನ ಮಾಡುತ್ತೆ ನೋಡ್ತೇವೆ. ಈ ತೀರ್ಮಾನವನ್ನು ಸ್ವತಃ ನ್ಯಾಯಾಲಯ ಒಪ್ಪುವ ಸಾಧ್ಯತೆ ಇಲ್ಲ. ನಿಮ್ಮ ಕ್ರಮಕ್ಕೆ ರಾಜ್ಯದ ಜನ ಛೀಮಾರಿ ಹಾಕ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ಜನ ಛೀಮಾರಿ ಹಾಕುತ್ತಾರೆ

ಈಗಿನ ಅಡ್ವೋಕೇಟ್ ಜನರಲ್ ಶಿವಕುಮಾರ್ ಖಾಸಗಿ ವಕೀಲರು ಎನ್ನುವ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅವರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಮುಖ್ಯಮಂತ್ರಿಗಳು ವಾಸ್ತವಿಕ ಸ್ಥಿತಿ ತಿಳಿದುಕೊಳ್ಳಬೇಕು. ಸಿದ್ದರಾಮಯ್ಯ ನೀವು ಇದರಲ್ಲಿ ಪಾಲುದಾರ ಆಗಲು ಹೊರಟಿದ್ದೀರಿ. ರಾಜ್ಯದ ಜನತೆ ಇದನ್ನು ಕ್ಷಮಿಸಲ್ಲ. ಎಜಿ ಕೂಡ ತಮ್ಮ ಕರ್ತವ್ಯ ಸರಿಯಾಗಿ ನಿಭಾಯಿಸಿಲ್ಲ ಎನ್ನುವ ಪರಿಸ್ಥಿತಿ ಬಂದಿದ್ದು ಗೌರವ ಅಲ್ಲ‌. ಅಡ್ವೋಕೇಟ್ ಜನರಲ್ ಕಾನೂನು ಚೌಕಟ್ಟಿನಲ್ಲಿ ಸಲಹೆ ನೀಡಬೇಕು‌. ಇಲ್ಲವಾದರೆ ಜನ ಛೀಮಾರಿ ಹಾಕುತ್ತಾರೆ ಎಂದು ಯಡಿಯೂರಪ್ಪ ಹರಿಹಾಯ್ದಿದ್ದಾರೆ.

RELATED ARTICLES

Related Articles

TRENDING ARTICLES