Wednesday, January 22, 2025

ನಾದಿನಿ ಜೊತೆ ಅಸಭ್ಯ ವರ್ತನೆ ಪ್ರಶ್ನಿಸಿದ್ದಕ್ಕೆ ಮುಖದ ಮೇಲೆ ಮೂತ್ರ ವಿಸರ್ಜಿಸಿ ವಿಕೃತಿ!

ಮೈಸೂರು: ನಾದಿನಿ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ ಅಂಬ್ಯೂಲೆನ್ಸ್ ಡ್ರೈವರ್​ನನ್ನು ಪ್ರಶ್ನೆ ಮಾಡಿದ, ಬಾವನ‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಮೈಸೂರು ಮೆಡಿಕಲ್ ಕಾಲೇಜು ಆಸ್ಪತ್ರೆ ಟ್ರಾಮಾ ಸೆಂಟರ್​ನ ಆಂಬ್ಯುಲೆನ್ಸ್ ಡ್ರೈವರ್ ಸಂದೇಶ್, ಅದೇ ಆಸ್ಪತ್ರೆಯ ಸೆಕ್ಯೂರಿಟಿ ಗಾರ್ಡ್ ಮಹೇಶ್ ನಾದಿನಿ ಜೊತೆ ಅಸಭ್ಯವಾಗಿ ವರ್ತಿಸಿದ್ದಾನೆ. ಇದನ್ನ ಪ್ರಶ್ನಿಸಿದ್ದಕ್ಕೆ ಸಂದೇಶ್​ ವಿಕೃತಿ ಮೆರೆದಿದ್ದು, ಮನಬಂದಂತೆ ಥಳಿಸಿ ಮುಖದ ಮೇಲೆ ಮೂತ್ರ ವಿಸರ್ಜನೆ ಮಾಡಿದ್ದಾನೆ. ಸದ್ಯ ಮಹೇಶ್ ಕೆ.ಆರ್.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಸಂದೇಶ್ ವಿರುದ್ಧ ದೇವರಾಜ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: ಮೆಟ್ರೋ ರೈಲಲ್ಲಿ ಭಿಕ್ಷೆ ಬೇಡಿದವನಿಗೆ ₹500 ದಂಡ!

ಈ ಹಿಂದೆ ಶೌಚಾಲಯದಲ್ಲಿ ಹಿಡನ್ ಕ್ಯಾಮರಾ ಇಟ್ಟು ಯುವತಿಯರು, ಆಸ್ಪತ್ರೆ ನರ್ಸ್​ಗಳ ವೀಡಿಯೋ ಮಾಡಿ ಸಿಕ್ಕಿಬಿದ್ದಿದ್ದ ಸಂದೇಶ್. ಈ ವಿಚಾರಕ್ಕೆ ಕೆ.ಆರ್‌.ಆಸ್ಪತ್ರೆಯಿಂದ ಸಂದೇಶ್​​ನನ್ನು ಕೆಲಸದಿಂದ ತೆಗೆಯಲಾಗಿತ್ತು. ಬಳಿಕ ಇದೀಗಾ ಮತ್ತೆ ಟ್ರಾಮಾ ಸೆಂಟರ್​​​​ಗೆ ಕೆಲಸಕ್ಕೆ ಸೇರಿದ್ದ ಸಂದೇಶ್. ಅಲ್ಲು ಕೂಡ ಇದೇ ರೀತಿಯ ತನ್ನ ಆಟಾಟೋಪ ಮುಂದುವರೆಸಿದ್ದ.

ಪವರ್ ಟಿವಿ ನ್ಯೂಸ್ ಡಿಜಿಟಲ್ ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ
👇
https://whatsapp.com/channel/0029Va5cjRY9Gv7Tls4bhb1n

RELATED ARTICLES

Related Articles

TRENDING ARTICLES