ಬೆಂಗಳೂರು: ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ಮಾಡಿದ ವ್ಯಕ್ತಿಯ ಮೇಲೆ ಮೆಟ್ರೋ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.
ವ್ಯಕ್ತಿಯೊಬ್ಬ ನಾನೂ ಮೂಗ, ಕಿವುಡ ಎಂದು ಚೀಟಿ ತೋರಿಸಿ ಮೆಟ್ರೋ ರೈಲಿನಲ್ಲಿ ಭಿಕ್ಷಾಟನೆ ಮಾಡಿದ್ದಾನೆ. ಈ ಹಿನ್ನೆಲೆ ಮೆಟ್ರೋ ಅಧಿಕಾರಿಗಳು ಈತನ ವಿರುದ್ಧ ಮೆಟ್ರೋ ಕಾಯ್ದೆ ಸೆಕ್ಷನ್ 39ರ ಅಡಿ ಕೇಸ್ ದಾಖಲಿಸಿದ್ದಾರೆ. 59 ಮಂದಿ ಪ್ರಯಾಣಿಕರಿಗೆ ತೊಂದರೆ ಪ್ರಕರಣದಲ್ಲಿ ಕೊಪ್ಪಳ ಮೂಲದ ಮಲ್ಲಿಕಾರ್ಜುನ್ನನ್ನ ವಶಕ್ಕೆ ಪಡೆದು ಅಧಿಕಾರಿಗಳು ದಂಡ ವಸೂಲಿ ಮಾಡಿದ್ದಾರೆ.
ಇದನ್ನೂ ಓದಿ: Bengaluru Kambala: ಅರಮನೆ ಮೈದಾನ ಸುತ್ತಮುತ್ತ ಸಂಚಾರ ಮಾರ್ಗ ಬದಲಾವಣೆ : ಇಲ್ಲಿದೆ ಕಂಪ್ಲೀಟ್ ಡಿಟೇಲ್ಸ್
ಯಶವಂತಪುರ ನಿಲ್ದಾಣದಲ್ಲಿ 150 ಕೊಟ್ಟು ಒಂದು ದಿನದ ಕಾರ್ಡ್ ತೆಗೆದುಕೊಂಡ ಈತ 250 ರಿಜಾರ್ಜ್ ಮಾಡಿಸಿಕೊಂಡಿದ್ದ. ನಂತರ ರೈಲನ್ನೇರಿ ಕನ್ನಡ ಹಾಗೂ ಇಂಗ್ಲಿಷ್‌ನಲ್ಲಿ ‘ನಾನು ಮೂಗ ಹಾಗೂ ಕಿವುಡ, ಸಹಾಯ ಮಾಡಿ’ ಎಂದು ಬರೆದಿದ್ದ ಚೀಟಿಗಳನ್ನು ಕೊಟ್ಟು ಭಿಕ್ಷೆ ಬೇಡಿದ್ದ ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭಿಕ್ಷಾಟನೆ ಮಾಡಿದ ವ್ಯಕ್ತಿಗೆ 500 ರೂ. ದಂಡ ವಿಧಿಸಿದ್ದಾಗಿ BMRCL ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ, BMRCL ಜನರು ರೈಲಿನೊಳಗೆ ತಿನ್ನುವುದು, ಟಿಕೆಟ್‌ಗಳನ್ನು ಖರೀದಿಸದೆ ಪಾವತಿಸಿದ ಪ್ರದೇಶಕ್ಕೆ ಪ್ರವೇಶಿಸುವುದು, ಸಾಮಾಜಿಕ ಮಾಧ್ಯಮಕ್ಕಾಗಿ ರೀಲ್‌ಗಳನ್ನು ರಚಿಸುವುದು, ಇತರ ಪ್ರಯಾಣಿಕರಿಗೆ ಅನಾನುಕೂಲತೆ ಉಂಟುಮಾಡುವುದು, ಉಗುಳುವುದು, ಧೂಮಪಾನ, ಇತ್ಯಾದಿಗಳಿಗೆ ದಂಡ ವಿಧಿಸಿದೆ.
ಪವರ್ ಟಿವಿ ನ್ಯೂಸ್ ಡಿಜಿಟಲ್ ವಾಟ್ಸ್ಯಾಪ್ ಚಾನಲ್ ಫಾಲೋ ಮಾಡಿ
👇
https://whatsapp.com/channel/0029Va5cjRY9Gv7Tls4bhb1n