Thursday, November 21, 2024

ಉತ್ತರಕಾಶಿ ಸುರಂಗ ಘಟನೆ : ಅಂತಿಮ ಹಂತದಲ್ಲಿ ರಕ್ಷಣಾ ಕಾರ್ಯ

ಉತ್ತರಕಾಶಿ: ಉತ್ತರಾಖಂಡದ ಉತ್ತರಕಾಶಿಯ ಸಿಲ್ಯಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತ ತಲುಪಿದೆ.

ಉತ್ತರಾಖಂಡದ ಸಿಲ್ಮಾರಾ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ಹೊರತರಲು ಎನ್‌ಡಿಆರ್‌ಎಫ್‌ ಸಿಬ್ಬಂದಿ ಕಾರ್ಯಾಚರಣೆ  ಮುಂಜಾನೆಯಿಂದ  ಆರಂಭವಾಗಿದ್ದು,ಸರ್ಕಾರ ಈಗಾಗಲೇ ಆಕ್ಸಿಜನ್ ಇರುವಂತಹ ಆಂಬುಲೆನ್ಸ್ ಮತ್ತು ವೈದ್ಯಕೀಯ ಉಪಕರಣಗಳನ್ನು ಆ ಸ್ಥಳಕ್ಕೆ ಕಳುಹಿಸಿದೆ.

ಸುರಂಗದಲ್ಲಿ 41 ಕಾರ್ಮಿಕರು ಸಿಲುಕಿಕೊಂಡಿದ್ದಾರೆ. ಕಾರ್ಮಿಕರನ್ನು ಹೊರತರುವ ಮಾರ್ಗ ಸಿದ್ಧಪಡಿಸಲು ಕೊನೆಯ ಪೈಪ್ ಅನ್ನು ಒಳಗೆ ಬಿಡಲಾಗಿದೆ.

ಇದನ್ನೂ ಓದಿ: ಸಚಿವ ಜಮೀರ್​ಗೆ ಬಿಗ್ ಶಾಕ್ : ತೆಲಂಗಾಣದಲ್ಲಿ ತಂಗಿದ್ದ ಹೋಟೆಲ್​​ ಮೇಲೆ ಪೊಲೀಸ್ ದಾಳಿ

ಕಾರ್ಮಿಕರನ್ನು ಸ್ಥಳಾಂತರಿಸಿದ ನಂತರ ತಕ್ಷಣವೇ ವೈದ್ಯಕೀಯ ಸೇವೆಯನ್ನು ಒದಗಿಸಲು ಎಲ್ಲ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ತಡರಾತ್ರಿ ರಂಧ್ರ ಕೊರೆಯುವಾಗ ಕೆಲವು ಕಬ್ಬಿಣದ ರಾಡ್‌ಗಳು ಆಗರ್ ಯಂತ್ರಕ್ಕೆ ಅಡ್ಡಿಪಡಿಸಿದ್ದರಿಂದ ಸಣ್ಣ ಅಡಚಣೆಯಾಗಿದೆ.

ಸಿಲ್ಯಾರಾ ಸುರಂಗದಿಂದ ರಕ್ಷಣೆ ಮಾಡಲಾಗುವ ಕಾರ್ಮಿಕರ ಚಿಕಿತ್ಸೆಗಾಗಿ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಪ್ರತ್ಯೇಕ ವಾರ್ಡ್ ಅನ್ನು ಸಿದ್ಧಪಡಿಸಲಾಗಿದೆ. 41ಆ್ಯಂಬುಲೆನ್ಸ್‌ ಗಳನ್ನು ಸುರಂಗದ ಹೊರಗೆ ಸಿದ್ದಗೊಳಿಸಲಾಗಿದೆ.

 

RELATED ARTICLES

Related Articles

TRENDING ARTICLES