Thursday, December 26, 2024

ಅಸಮಾಧಾನ ಇತ್ತು, ನಾವೂ ಮನುಷ್ಯರೇ ಅಲ್ವಾ?: ರಮೇಶ್ ಜಾರಕಿಹೊಳಿ

ಬೆಂಗಳೂರು : ನಮ್ಮ ನೋವು ಏನು ಅಂತ ಈಗ ಹೇಳಕ್ಕೆ ಬರಲ್ಲ, ಲೋಕಸಭಾ ಚುನಾವಣೆವರೆಗೂ ಅಸಮಾಧಾನ ತೋರಿಸಲ್ಲ ಎಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ಬಳಿಕ ಮಾತನಾಡಿದ ಅವರು, ನಾವು ಇಬ್ಬರೂ ಚರ್ಚೆ ಮಾಡಿದ್ದೇವೆ. ನಾಲ್ಕು ಗೋಡೆ ಮಧ್ಯೆ ಮಾಡಿದ ಚರ್ಚೆ ಹೇಳಲ್ಲ, ವಿಜಯೇಂದ್ರ ಈಗ ನಮ್ಮ ಅಧ್ಯಕ್ಷರು, ಅವರ ಬಗ್ಗೆ ನಾವು ಪ್ರಶ್ನೆ ಮಾಡಲ್ಲ ಎಂದು ತಿಳಿಸಿದರು.

ನಿನ್ನೆ ನಾನು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಸುನೀಲ್ ಕುಮಾರ್ ಚರ್ಚೆ ಮಾಡಿ ಸಹಕಾರ ಕೊಡಲು ನಿರ್ಣಯ ತೆಗೆದುಕೊಂಡಿದ್ದೇವೆ. ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ಕೂಡಿ ಕೆಲಸ ಮಾಡಲು ಒಪ್ಪಿದ್ದೇವೆ. ವಿಜಯೇಂದ್ರ ಇವತ್ತು ಬಂದಿದ್ದಾರೆ, ಎಲ್ಲವೂ ಈಗ ಸರಿಯಾಗಿದೆ. ನಾವೆಲ್ಲ ಒಟ್ಟಿಗೆ ಕೆಲಸ ಮಾಡ್ತೇವೆ, ನಾವು ಅಸಮಾಧಾನ ತೋರಿಸಲ್ಲ ಎಂದು ಹೇಳಿದರು.

ಅಸಮಾಧಾನ ಇತ್ತು, ನಾವೂ ಮನುಷ್ಯರೇ ಅಲ್ವಾ?

ಬಿ.ವೈ. ವಿಜಯೇಂದ್ರ, ಆರ್. ಅಶೋಕ್ ಅವರನ್ನು ಒಪ್ಪಿಕೊಂಡಿದ್ದೇವೆ. ಲೋಕಸಭೆ ಚುನಾವಣೆ ದೃಷ್ಟಿಯಿಂದ ಸಹಕಾರ ಕೊಡ್ತೇವೆ, ಬಿಜೆಪಿಯಲ್ಲಿ ಪಕ್ಷದ ಸಂಘಟನೆ ಶುರು ಮಾಡ್ತೇವೆ. ಅಸಮಾಧಾನ ಇತ್ತು, ನಾವೂ ಮನುಷ್ಯರೇ ಅಲ್ವಾ? ಈಗ ನಮ್ಮ ಟಾಸ್ಕ್ ಮೋದಿಯವರನ್ನ ಮತ್ತೆ ಪ್ರಧಾನಿ ಮಾಡುವುದು. ಈಗ ಅಸಮಾಧಾನ ಇಲ್ಲ, ಎಲ್ಲವೂ ಸರಿ ಹೋಗಿದೆ ಎಂದು ಪುನರುಚ್ಚರಿಸಿದ್ದಾರೆ.

ಅವರಿಬ್ಬರ ಆಯ್ಕೆ ಹೈಕಮಾಂಡ್ ನಿರ್ಧಾರ

ಆರ್. ಅಶೋಕ್, ವಿಜಯೇಂದ್ರ ಇಬ್ಬರನ್ನೂ ಸ್ವಾಗತ ಮಾಡಬೇಕಾಗುತ್ತದೆ. ಅವರಿಬ್ಬರ ಆಯ್ಕೆ ಹೈಕಮಾಂಡ್ ನಿರ್ಧಾರ. ನಾವು ಒಪ್ಪಿಕೊಂಡು ಕೆಲಸ ಮಾಡಬೇಕಾಗುತ್ತದೆ. ಈಗ ಸದ್ಯಕ್ಕೆ ಏನೂ ಮಾತನಾಡದಂತೆ ಹೇಳಿದ್ದಾರೆ. ಏನೇ ಇದ್ದರೂ ಲೋಕಸಭೆ ಚುನಾವಣೆ ನಂತರ ಚರ್ಚೆ ಮಾಡುತ್ತೇವೆ ಎಂದು ರಮೇಶ್ ಜಾರಕಿಹೊಳಿ ತಿಳಿಸಿದರು.

RELATED ARTICLES

Related Articles

TRENDING ARTICLES