Wednesday, January 22, 2025

ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ರೋಚಕ ಗೆಲುವು

ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ಮೊದಲ ಟಿ-20 ಪಂದ್ಯದಲ್ಲಿ ಭಾರತ 2 ವಿಕೆಟ್​ಗಳ ರೋಚಕ ಗೆಲುವು ದಾಖಲಿಸಿತು. ಈ ಮೂಲಕ ಕಳೆದ ಭಾನುವಾರ ನಡೆದಿದ್ದ ವಿಶ್ವಕಪ್ ಫೈನಲ್ ಪಂದ್ಯದ ಆಸಿಸ್ ವಿರುದ್ಧದ ಸೇಡನ್ನು ಇಂದು ಯಂಗ್ ಇಂಡಿಯಾ ತೀರಿಸಿಕೊಂಡಿತು.

ವಿಶಾಖಪಟ್ಟಣಂನ ಡಾ.ವೈಎಸ್. ರಾಜಶೇಖರ ರೆಡ್ಡಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಪಡೆ ಕೊನೆಯ ಎಸೆತದಲ್ಲಿ ಗೆಲುವು ಸಾಧಿಸಿತು.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟಕ್ಕೆ 208 ರನ್​ ಗಳಿಸಿತ್ತು. 209 ರನ್​ಗಳ ಬೃಹತ್ ಟಾರ್ಗೆಟ್ ಬೆನ್ನತ್ತಿದ ಭಾರತ 19.5 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಕೊನೆಯ ಓವರ್​ನಲ್ಲಿ ಮೊದಲ ಎಸೆತ 4, ಎರಡನೇ ಎಸೆತ 1, ಮೂರು, ನಾಲ್ಕು ಹಾಗೂ ಐದನೇ ಎಸೆತ ವಿಕೆಟ್ ಕಳೆದುಕೊಂಡಿತು. ಆರನೇ ಎಸೆತವನ್ನು ರಿಂಕು ಸಿಂಗ್ ಸಿಕ್ಸರ್ ಬಾರಿಸುವ ಮೂಲಕ ತಂಡಕ್ಕೆ ಗೆಲುವು ತಂದುಕೊಟ್ಟರು.

ಭಾರತದ ಪರ ನಾಯಕ ಸೂರ್ಯಕುಮಾರ್ ಯಾದವ್ 88, ಇಶಾನ್ ಕಿಶನ್ 58, ಝೈಸ್ವಾಲ್ 21, ರಿಂಕು ಸಿಂಗ್ ಅಜೇಯ 28 ರನ್​ ಗಳಿಸಿದರು. ಆಸ್ಟ್ರೇಲಿಯಾ ಪರ ತನ್ವೀರ್ 2, ಶಾರ್ಟ್, ಅಬಾಟ್ ಹಾಗೂ ಜೇಸನ್ ತಲಾ ಒಂದು ವಿಕೆಟ್ ಪಡೆದದರು.

RELATED ARTICLES

Related Articles

TRENDING ARTICLES