Sunday, December 22, 2024

ಪೊಲೀಸ್‌ ‘112’ ವಾಹನವನ್ನೇ ಚಲಾಯಿಸಿಕೊಂಡು ಪರಾರಿಯಾದ ಆರೋಪಿ

ಗುಬ್ಬಿ: ಪೊಲೀಸ್‌ 112 ವಾಹನವನ್ನೇ ಚಲಾಯಿಸಿಕೊಂಡು ಪರಾರಿಯಾಗಿರುವ ಘಟನೆ ಗುಬ್ಬಿ ತಾಲೂಕಿನ ಸಿ.ಎಸ್. ಪುರ ಹೋಬಳಿಯ ನಾರನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಸಹೋದರರಿಬ್ಬರ ಜಗಳ ಬಿಡಿಸಲು ಬಂದಿದ್ದ ವೇಳೆ ಪೊಲೀಸ್‌ 112 ವಾಹನವನ್ನು ಆರೋಪಿಯೊಬ್ಬ ಚಲಾಯಿಸಿಕೊಂಡು ಪರಾರಿಯಾಗಿದ್ದಾನೆ. ಪೊಲೀಸ್‌ 112 ವಾಹನವನ್ನು ಓಡಿಸಿಕೊಂಡು ಹೋಗಿದ್ದ ಆರೋಪಿ ಮುನಿಯ.

ಸೋಮವಾರ ತಡರಾತ್ರಿ ಸಹೋದರರ ನಡುವೆ ಜಗಳವಾಗಿತ್ತು ಈ ವೇಳೆ ಆರೋಪಿ ಸಹೋದರ 112ಕ್ಕೆ ಕರೆ ಮಾಡಿದ್ದ. ಜಗಳ ಬಿಡಿಸಲು ಗ್ರಾಮಕ್ಕೆ 112 ವಾಹನದಲ್ಲಿ ಪೊಲೀಸ್ ಸಿಬ್ಬಂದಿ ಆಗಮಿಸಿದ್ದರು.

ಇದನ್ನೂ ಓದಿ: ಹೈಫೈ ಎಳನೀರು ಕಳ್ಳ : ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ

ಈ ಸಂದರ್ಭದಲ್ಲಿ ಆರೋಪಿ ಮುನಿಯ, 112 ವಾಹನದ ಹಿಂಬದಿಯ ಗಾಜನ್ನು ಒಡೆದಿದ್ದಾನೆ. ಇದನ್ನು ನೋಡಲು ಕಾರು ನಿಲ್ಲಿಸಿ ಹಿಂಬದಿಗೆ ಪೊಲೀಸರು ಹೋಗಿದ್ದ ವೇಳೆ ಪೊಲೀಸರ ವಾಹನವನ್ನೇ ಆತ ವೇಗವಾಗಿ ಓಡಿಸಿಕೊಂಡು ಪರಾರಿಯಾಗಿದ್ದಾನೆ.

ಬಳಿಕ ಪೊಲೀಸರು ಸತತ ಮೂರು ಗಂಟೆಗಳ ಕಾಲ ಹುಡುಕಾಟ ನಡೆಸಿದ ನಂತರ ತುಮಕೂರು ತಾಲೂಕಿನ ಹೆಬ್ಬೂರು ಬಳಿ 112 ವಾಹನ ಪತ್ತೆ ಮಾಡಿದ್ದಾರೆ. ಆರೋಪಿಯನ್ನು ಪೊಲೀಸರ ವಶಕ್ಕೆ ಪಡೆದಿದ್ದಾರೆ. ಈ ಕುರಿತು ಹೆಬ್ಬೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES