Sunday, December 22, 2024

ನಟಿ ತ್ರಿಷಾ ಕುರಿತ ಹೇಳಿಕೆ: ಮನ್ಸೂರ್ ಅಲಿ ಖಾನ್ ವಿರುದ್ಧ ಕೇಸ್ ದಾಖಲು!

ಚನ್ನೈ: ತಮಿಳು ಚಿತ್ರೋದ್ಯಮ ಖ್ಯಾತ ವಿಲನ್ ಮನ್ಸೂರ್ ಅಲಿ ಖಾನ್, ನಿಜ ಜೀವನದಲ್ಲೂ ವಿಲನ್ ಆಗಿದ್ದಾರೆ.

ಇತ್ತೀಗೆ ಮನ್ಸೂರ್ ಅಲಿ ಖಾನ್​ ನೀಡಿರುವ ಹೇಳಿಕೆಯೊಂದು ಬಾರಿ ಚರ್ಚೆಗೆ ಕಾರಣವಾಗಿದೆ. ಲಿಯೋ ಸಿನಿಮಾದಲ್ಲಿ ನಾಯಕಿ ತ್ರಿಷಾ ಅವರನ್ನು ರೇಪ್ ಮಾಡುವಂತಹ ಸನ್ನಿವೇಶ ಇದೆ ಅಂದುಕೊಂಡಿದೆ. ಆದರೆ, ಇರಲಿಲ್ಲ. ಇದಿದ್ದರೆ ಅನಾಮತ್ತಾಗಿ ಎತ್ತಿಕೊಂಡು ಹೋಗಿ ಬೆಡ್ ಮೇಲೆ ಬೀಸಾಕುತ್ತಿದ್ದೆ. ಈ ಹಿಂದೆ ಖುಷ್ಬೂ ಸೇರಿದಂತೆ ಹಲವರನ್ನು ಹಾಗೆಯೇ ಮಾಡಿದ್ದೆ ಎಂದು ಹೇಳಿಕೆ ನೀಡಿದ್ದರು.

ಇದನ್ನೂ ಓದಿ: ನಾಯಿ ಅಡ್ಡ ಬಂದು ಬೈಕ್ ಸವಾರ ಸಾವು, ತನ್ನಿಂದಾದ ತಪ್ಪಿಗೆ ಮೃತನ ಮನೆಗೆ ಬಂದು ಕಣ್ಣೀರಿಟ್ಟ ಶ್ವಾನ

ತ್ರಿಷಾ ಬಗೆಗಿನ ಮತ್ತು ಒಟ್ಟಾರೆ ನಟಿಯರ ಬಗ್ಗೆ ಆಡಿದ್ದ ಈ ಮಾತು ಭಾರೀ ವಿವಾದಕ್ಕೆ ಕಾರಣವಾಗಿತ್ತು. ತ್ರಿಷಾ ಸೇರಿದಂತೆ ಹಲವರು ನಟನೆ ನಡೆಯನ್ನು ಖಂಡಿಸಿದ್ದರು. ಇಷ್ಟೆಲ್ಲ ನಡೆದರೂ ಮನ್ಸೂರ್ ಅಲಿ ಖಾನ್ ಮಾತ್ರ ಕ್ಷಮೆ ಕೇಳುವುದಿಲ್ಲ ಎಂದು ಹೇಳಿಕೆ ನೀಡಿದ್ದರು. ನನ್ನ ಮಾತು ತಿರುಚಲಾಗಿದೆ ಎಂದು ಮಾತನಾಡಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ಮಧ್ಯ ಪ್ರವೇಶಿಸಿತ್ತು. ದೂರು ದಾಖಲಿಸುವಂತೆ ಪೊಲೀಸ್ ಇಲಾಖೆಗೆ ತಿಳಿಸಿತ್ತು. ಅದರಂತೆ ತಮಿಳು ನಾಡು ಪೊಲೀಸರು ನಟನ ವಿರುದ್ಧ ದೂರು ದಾಖಲಿಸಿಕೊಂಡಿದ್ದಾರೆ.

RELATED ARTICLES

Related Articles

TRENDING ARTICLES