Sunday, November 17, 2024

ಹೈಫೈ ಎಳನೀರು ಕಳ್ಳ : ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ

ಬೆಂಗಳೂರು: ಕಳ್ಳರೆಂದರೆ ಯಾವಾಗಲೂ ಶ್ರೀಮಂತರ ಮನೆ, ಶಾಪ್‌ಗಳಿಗೆ ನುಗ್ಗಿ ಬೆಲೆ ಬಾಳುವ ವಸ್ತುಗಳನ್ನು ಕದಿಯುವುದು ಸಾಮಾನ್ಯ. ಆದರೆ ಇಲ್ಲೊಬ್ಬ ವಿಚಿತ್ರ ಕಳ್ಳನಿದ್ದಾನೆ. ಇವನು ಯಾರ ಮನೆಗೂ ನುಗ್ಗೋದಿಲ್ಲ. ನಗನಾಣ್ಯ ಕದಿಯೋದಿಲ್ಲ. ಆದರೆ ಇವನ ಕಣ್ಣಿಗೆ ಎಲ್ಲೇ ಎಳೆನೀರು ಕಂಡ್ರೂ ಕ್ಷಣಾರ್ಧದಲ್ಲಿ ಕದಿಯುತ್ತಾನೆ.

ಹೌದು, ನಗರದಲ್ಲಿ ಎಳನೀರು ಕದಿಯುತ್ತಿದ್ದ ಮೋಹನ್ ಎಂಬ ವಿಚಿತ್ರ ಆಸಾಮಿಯನ್ನು ಗಿರಿನಗರ ಪೊಲೀಸರು ಬಂಧಿಸಿದ್ದಾರೆ. ಮೂಲತಃ ತಮಿಳುನಾಡಿನವನಾದ ಆರೋಪಿ ಮೋಹನ್, ಮಡಿವಾಳದಲ್ಲಿ ವಾಸವಾಗಿದ್ದ. ಕಳೆದ ಮೂರು ತಿಂಗಳಿಂದ ಎಳನೀರು ಕಳ್ಳತನ ಮಾಡುತ್ತಿದ್ದ.

ಎಳನೀರು ಕದಿಯಲು ಬರುತ್ತಿದ್ದುದ್ದು ಮಾತ್ರ ಕಾರಿನಲ್ಲೇ ರಾತ್ರಿ ವೇಳೆ ಕಾರಿನಲ್ಲಿ ಬಂದು ರಸ್ತೆ ಬದಿಯ ಎಳನೀರು ಅಂಗಡಿಗಳಲ್ಲಿ ಕಳ್ಳತನ ಮಾಡುವುದನ್ನೇ ಕಾಯಕ ಮಾಡಿಕೊಂಡಿದ್ದ ಆರೋಪಿ.

ಇದನ್ನೂ ಓದಿ: ನಮ್ಮ ಮೆಟ್ರೋದಲ್ಲಿ ಲೈಂಗಿಕ ದೌರ್ಜನ್ಯ ಆರೋಪ

ಇತ್ತೀಚೆಗೆ ಗಿರಿನಗರದ ಮಂಕುತಿಮ್ಮನ ಪಾರ್ಕ್ ಬಳಿ ರಾಜಣ್ಣ ಎಂಬುವರ 1150 ಎಳನೀರು ಕದ್ದಿದ್ದ ಆರೋಪಿ. ಈ ಬಗ್ಗೆ ರಾಜಣ್ಣ ಗಿರಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡು ಸಿಸಿಟಿವಿ ಪರಿಶೀಲನೆ ನಡೆಸಿದಾಗ ಪೊಲೀಸರಿಗೆ ಶಾಕ್ ಆಗಿತ್ತು.

ರಾತ್ರಿವೇಳೆ ಕಾರಿನಲ್ಲಿ ಬಂದು ಎಳನೀರು ಕದಿಯುತ್ತಿದ್ದ ಆಸಾಮಿ ಮೋಹನ್ ಎಂಬುದು ಖಚಿತವಾಗಿ ಆರೋಪಿಯನ್ನು ಬಂಧಿಸಿರುವ ಪೊಲೀಸರು. ಬಂಧಿತನಿಂದ ಎಳನೀರು ಸೇರಿ ಎಂಟು ಲಕ್ಷ ಮೌಲ್ಯದ ಒಂದು ಕಾರು, ರಾಯಲ್ ಎನ್ ಫೀಲ್ಡ್ ಬೈಕ್ ಪೊಲೀಸರ್ ವಶಕ್ಕೆ ಪಡೆದುಕೊಂಡಿದ್ದಾರೆ.

ರಮ್ಮಿ ಆಡಿ ಲಕ್ಷ ಲಕ್ಷ ಹಣ ಕಳೆದುಕೊಂಡಿದ್ದ ಮೋಹನ 
ಮೊದಲು ಎಳನೀರು ವ್ಯಾಪಾರಿಯಾಗಿದ್ದ ಆರೋಪಿ
ಪ್ರತಿದಿನ ರಾತ್ರಿ ಕಾರು ಬಾಡಿಗೆಗೆ ಪಡೆದು ಎಳನೀರು ಕಳ್ಳತನಕ್ಕೆ ಬರುತ್ತಿದ್ದ ಅಸಾಮಿ. ಈ ಹಿಂದೆ ಎಳನೀರು ವ್ಯಾಪಾರಿಯಾಗಿದ್ದ ಆರೋಪಿ ಮೋಹನ್‌. ಹೀಗಾಗಿ ಫ್ರೀ ಟೈಂನಲ್ಲಿ ರಮ್ಮಿ ಆಡಿ ಲಕ್ಷ ಲಕ್ಷ ಸಾಲ ಮಾಡಿಕೊಂಡಿದ್ದ. ಮೊದಲಿಗೆ ಕಾರು ಬಾಡಿಗೆ ಪಡೆದು ಟ್ಯಾಕ್ಸಿ ಓಡಿಸುತ್ತಿದ್ದ ಆರೋಪಿ ಬಳಿಕ ರಾತ್ರಿ ಆಗ್ತಿದ್ದಂತೆ ಕಾರು ಬಾಡಿಗೆ ಪಡೆದುಕೊಂಡು ಎಳನೀರು ಕದಿಯುವ ಕಾಯಕ ಮಾಡಿಕೊಂಡಿದ್ದೇನೆ.

ಕದ್ದ ಎಳನೀರು ಮಾರಲು ಪರ್ಮನೆಂಟ್ ಕಸ್ಟಮರ್ ಇಟ್ಕೊಂಡಿದ್ದಇವನೆಂಥ ಕಾನ್ಫಿಡೆಂಟ್ ಕಳ್ಳನೆಂದರೆ ಕದ್ದ ಎಳನೀರು ಮಾರಾಟಕ್ಕೆ ಪರ್ಮನೆಂಟಾಗಿ ಕಸ್ಟಮರ್‌ಗಳನ್ನ ಇಟ್ಟುಕೊಂಡಿದ್ದ ಎಳನೀರು ವ್ಯಾಪಾರಿಯೊಬ್ಬನಿಗೆ ಮದ್ದೂರು ಎಳನೀರು ಅಂತಾ ಮಾರಾಟ ಮಾಡಿ ಹೋಗುತ್ತಿದ್ದ. ಹೀಗೆ ದಿನಕ್ಕೆ 100-150 ಎಳನೀರು ಕದ್ದು ಮಾರಾಟ ಮಾಡ್ತಿದ್ದ.

 

RELATED ARTICLES

Related Articles

TRENDING ARTICLES