Monday, December 23, 2024

ಜಾತಿ‌ ಜನಗಣತಿ ಬಗ್ಗೆ ಸಿಎಂ ದ್ವಂದ್ವ ನಿಲುವು: ಶಾಸಕ ಸುನೀಲ್ ಕುಮಾರ್

ಬೆಂಗಳೂರು: ಜಾತಿ‌ ಜನಗಣತಿ ಬಗ್ಗೆ ಸಿಎಂ ಸಿದ್ದರಾಮಯ್ಯ ದ್ವಂದ್ವ ನಿಲುವು ಪ್ರದರ್ಶಿಸ್ತಿದ್ದಾರೆ. ವರದಿಯನ್ನು ರಾಜಕೀಯವಾಗಿ ಬಳಸಿಕೊಳ್ತಿದ್ದಾರೆ ಎಂದು ಶಾಸಕ ಸುನಿಲ್​ ಕುಮಾರ್​​​ ಕಿಡಿಕಾರಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ವರದಿ ಸರ್ಕಾರದ ಕೈಸೇರುವ ಮುನ್ನವೇ ಕಾಂಗ್ರೆಸ್​​ ಮಂತ್ರಿಗಳು, ಶಾಸಕರು ಚರ್ಚೆ ಮಾಡ್ತಿದ್ದಾರೆ. ವರದಿಯ ಸಾಧಕ-ಬಾಧಕಗಳ ಬಗ್ಗೆ ಚರ್ಚೆಗೆ ಅವಕಾಶ ಕೊಡಲಿ. ವರದಿಯ ಅಂಶಗಳು ಸೋರಿಕೆ ಆಗಿದ್ದು ಹೇಗೆ ಮತ್ತು ಯಾಕೆ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: 2025 ರೊಳಗೆ ರಕ್ತಹೀನತೆ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ: ಸಚಿವ ದಿನೇಶ್ ಗುಂಡೂರಾವ್

ಹಿಂದುಳಿದ ವರ್ಗಗಳನ್ನು ಕತ್ತಲೆಯಲ್ಲಿಡುವ ಪ್ರಯತ್ನಕ್ಕೆ ಸರ್ಕಾರ ಮುಂದಾಗಿದೆ. ಕಾಂಗ್ರೆಸ್​​ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ ಅಂತಾ ವರದಿ ಪಡೆಯಲು ಮುಂದಾಗಿದ್ದಾರೆ. ವರದಿಯ ಚರ್ಚೆಗೆ ಅವಕಾಶ ಕೊಡಲಿ, ಗಣ್ಯರ ಅಭಿಪ್ರಾಯ ಪಡೆದು ಸರ್ಕಾರ ಮುಂದುವರೆಯಲಿ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES