ಬೀದರ್: ಜಾತಿಗಣತಿ ವಿಚಾರದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಅತಿ ಬುದ್ದಿವಂತನಂತೆ ನಡೆದುಕೊಳ್ಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ತಿಳಿಸಿದರು.
ಬೀದರ್ನಲ್ಲಿ ಮಾದ್ಯಮದವರೊಂದಿಗೆ ಮಾತನಾಡಿದ ಅವರು, ಜಾತಿಗಣತಿ ಮಾಡಿದ್ದು ಅವೈಜ್ಞಾನಿಕ, ಸರಿಯಾಗಿ ಮಾಡಿಲ್ಲ, ಬಹಳ ಹಿಂದೆ ಮಾಡಿರುವಂತದ್ದು, ಅದಾದ ಮೇಲೆ ಬಹಳ ಜನಸಂಖ್ಯೆ ಹೆಚ್ಚಾಗಿದೆ
ಮರು ಪರಿಶೀಲನೆ ಮಾಡಬೇಕು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ.
ಜಾತಿಗಣತಿ ಸಂಬಧಿಸಿ ನನಗೂ ಒಂದು ಪತ್ರ ಬಂದಿತ್ತು. ಅದರಲ್ಲಿ, ಜಾತಿ ಜನ ಗಣತಿ ಮಾಡಿದ್ದು ಅವೈಜ್ಞಾನಿಕ, ಸರಿಯಾಗಿ ಮಾಡಿಲ್ಲ, ಬಹಳ ಹಿಂದೆ ಮಾಡಿರುವಂತದ್ದು, ಅದಾದ ಮೇಲೆ ಬಹಳ ಜನಸಂಖ್ಯೆ ಹೆಚ್ಚಾಗಿದೆ. ಮರು ಪರಿಶೀಲನೆ ಮಾಡಬೇಕು ಎಂಬುವುದು ಎಲ್ಲರ ಅಭಿಪ್ರಾಯವಾಗಿದೆ. ಜಾತಿಗಣತಿ ವಿರೋಧಿಸುವಂತೆ ಸಚಿವ ಕೃಷ್ಣ ಭೈರೇಗೌಡ ಅವರನ್ನು ಬಿಟ್ಟು ಆದಿ ಚುಂಚನಗಿರಿ ಸ್ವಾಮೀಜಿ, ಡಿ.ಕೆ.ಶಿವಕುಮಾರ್, ಸಚಿವ ಡಾ.ಸುಧಾಕರ ಸೇರಿ ಎಲ್ಲ ಸಚಿವರು ಸಹಿ ಹಾಕಿದ್ದಾರೆ ಎಂದರು.
ಇದನ್ನೂ ಓದಿ: ಜಾತಿಗಣತಿ ವಿಚಾರ ನಮ್ಮ ಪಕ್ಷದ ನಿಲುವಿಗೆ ನಾವು ಬದ್ದ: ಡಿಕೆಶಿ
ಜಾತಿ ಗಣತಿ ತರಬೇಕಾ ಅಥವ ಬೇಡವಾ ಎಂದು ಕ್ಯಾಬಿನೆಟ್ ನಲ್ಲಿ ತೀರ್ಮಾನವಾಗಬೇಕು, ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಾರೆ ಜಾತಿಗಣತಿ ಜಾರಿ ನಾವು ಮಾಡೇ ಮಾಡುತ್ತೇವೆ ಎಂದು, ಅಲ್ಲಿ ಸಿಎಂ ಹೇಳುತ್ತಾರೆ, ಇಲ್ಲಿ ನೀವು ವಿರೋಧಿಸುತ್ತೀರಿ ಈ ಸರ್ಕಾರದಲ್ಲಿ ಯಾರು ಪವರ್ ಫುಲ್ ಎಂದು ತಿಳಿಯುತ್ತಿಲ್ಲ ಎಂದು ಡಿಸಿಎಂ, ಡಿ.ಕೆ.ಶಿವಕುಮಾರ್ ವಿರುದ್ಧ ಆರ್.ಅಶೋಕ್ ವಾಗ್ದಾಳಿ ನಡೆಸಿದರು.
ಜಾತಿ ಗಣತಿ ಸಂಬಂಧ ಹೋರಾಟ ಮಾಡಲೇಬೇಕು, ಮಾಡೆ ಮಾಡ್ತೆವೆ, ಅದರಲ್ಲಿ ಏನು ನ್ಯೂನತೆ ಇದೆ ಅದನ್ನ ಸರಿಪಡಿಸಬೇಕು ಎನ್ನುತ್ತಾರೆ ಡಿಕೆಶಿ. ಜಾತಿಗಣತಿ ಜಾರಿ ಮಾಡುತ್ತೇವೆ ಅಂತ ಹೇಳುವ ಡಿಕೆಶಿ, ವಿರೋಧ ಮಾಡುವ ಅಭಿಯಾನಕ್ಕೆ ಸಹಿ ಯಾಕೆ ಮಾಡಿದರು. ತಾನು ಅತಿ ಬುದ್ದಿವಂತ ಅಂತ ಹೇಳ್ತಾರಲ್ಲ ಡಿಕೆಶಿ ಗೊತ್ತಿಲ್ಲದೆ ಸಹಿ ಹೇಗೆ ಮಾಡುತ್ತಾರೆ ಎಂದು ಪ್ರಶ್ನಿಸಿದರು.