Wednesday, January 22, 2025

ನಾಯಿ ಅಡ್ಡ ಬಂದು ಬೈಕ್ ಸವಾರ ಸಾವು, ತನ್ನಿಂದಾದ ತಪ್ಪಿಗೆ ಮೃತನ ಮನೆಗೆ ಬಂದು ಕಣ್ಣೀರಿಟ್ಟ ಶ್ವಾನ

ದಾವಣಗೆರೆ: ನಾಯಿಗಿರುವ ನಿಯತ್ತು ಮನುಷ್ಯರಿಗಿರಲ್ಲ ಅಂತ ಹೇಳುತ್ತಾರೆ. ಅದಕ್ಕೆ ಒಂದು ತುತ್ತು ಅನ್ನ ಹಾಕಿದ್ರೆ ಜೀವನಪರ್ಯಂತ ಅನ್ನ ಹಾಕಿದವನಿಗೆ ನಿಯತ್ತಾಗಿರುತ್ತೆ. ಈ ಮೂಕ ಪ್ರಾಣಿ ಈಗ ತನ್ನಿಂದ ಆದ ತಪ್ಪಿಗೆ ಮರುಕ ಪಟ್ಟಿರುವ ವಿಸ್ಮಯಕಾರಿ ಘಟನೆ ಬೆಣ್ಣೆನಗರಿಯಲ್ಲಿ ನಡೆದಿದೆ.

ಹೌದು, ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಕ್ಯಾಸಿನಕೆರೆ ಗ್ರಾಮದಲ್ಲಿ ಈ ವಿಸ್ಮಯಕಾರಿ ಘಟನೆ ನಡೆದಿದೆ. ಚಲಿಸುತ್ತಿದ್ದ ಬೈಕ್‌ಗೆ ನಾಯಿ ಅಡ್ಡ ಬಂದು ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ್ದ, ಬೈಕಿಗೆ ಅಡ್ಢ ಬಂದಿದ್ದ ನಾಯಿ ಮೃತನ ಮನೆಗೆ ಬಂದು ಕುಟುಂಬಸ್ಥರಿಗೆ ಸಾಂತ್ವನ ಹೇಳಿದೆ.

ಇದನ್ನೂ ಓದಿ: ಹೈಫೈ ಎಳನೀರು ಕಳ್ಳ : ಕದಿಯಲು ಕಾರಿನಲ್ಲಿ ಬರುತ್ತಿದ್ದ ಆಸಾಮಿ

ಏನಿದು ವಿಸ್ಮಯಕಾರಿ ಘಟನೆ

ಕಳೆದ ಗುರುವಾರ ಕ್ಯಾಸಿನಕೆರೆ ಗ್ರಾಮದಿಂದ ಅನವೇರಿ ಗ್ರಾಮಕ್ಕೆ ಸಹೋದರಿಯನ್ನು ಬಿಟ್ಟು ಬರಲು ಹೋಗಿದ್ದ. ಈ ವೇಳೆ ಬಿಟ್ಟು ವಾಪಸ್ಸು ಬರುವಾಗ ಕುರುಬರವಿಟ್ಲಾಪುರದ ಬಳಿ ಬೈಕ್ ಗೆ ನಾಯಿ ಅಡ್ಡ ಬಂದು ಅಪಘಾತ ನಡೆಯಿತು. ಅಪಘಾತದಲ್ಲಿ ತಿಪ್ಪೇಶ್  ಸ್ಥಳದಲ್ಲೇ ಸಾವನ್ನಪ್ಪಿದ್ದ. ಸಾವನ್ನಪ್ಪಿದ ಮೂರನೇ ದಿನಕ್ಕೆ ಮೃತನ ಮನೆಗೆ  ಅದೇ ನಾಯಿ ಆಗಮಿಸಿದೆ. ಮನೆಗೆ ಬಂದು ತಿಪ್ಪೇಶ್ ಕೊಠಡಿ, ಅಡುಗೆ ಮನೆ ಯನ್ನು ಸುತ್ತಾಡಿದ ನಾಯಿ. ತಿಪ್ಪೇಶ್ ತಾಯಿಯನ್ನು ಅಳದಂತೆ ಸಮಾಧಾನ ಮಾಡಿದೆ. ನಾಯಿ ಸುತ್ತಾಡುವುದನ್ನು ನೋಡಿ ಗ್ರಾಮಸ್ಥರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES