Friday, November 22, 2024

2025 ರೊಳಗೆ ರಕ್ತಹೀನತೆ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ: ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು: ರಾಜ್ಯದ ಜನಸಾಮಾನ್ಯರ ರಕ್ತ ಹೀನತೆಯನ್ನ ತೊಡೆದು ಹಾಕಲು ನಮ್ಮ ಆರೋಗ್ಯ ಇಲಾಖೆ ಕಠಿಬದ್ದವಾಗಿದ್ದು ಅನೀಮಿಯ ಮುಕ್ತ ಪೌಷ್ಠಿಕ ಕರ್ನಾಟಕ ನಿರ್ಮಾಣದತ್ತ ನಮ್ಮ ಸರ್ಕಾರ ಸದಾ ಸಿದ್ದವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಈ ಕುರಿತು ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್​ ಮಾಡಿದ್ದು ಸಿಎಂ ಸಿದ್ದರಾಮಯ್ಯ ಅವರು ವಿಶೇಷ ಕಾಳಜಿ ವಹಿಸಿ ₹185.74 ಕೋಟಿ ಅನುದಾನ ಒದಗಿಸಿದ್ದಾರೆ. ನವಜಾತ ಶಿಶುಗಳು, ಮಕ್ಕಳು, ಹದಿಹರೆಯದವರು, ಗರ್ಭಿಣಿಯರು, ತಾಯಂದಿರಲ್ಲಿ ರಕ್ತಹೀನತೆ ಮತ್ತು ಅಪೌಷ್ಟಿಕತೆ ನಿವಾರಿಸಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ‘ಅನೀಮಿಯಾ ಮುಕ್ತ ಪೌಷ್ಟಿಕ ಕರ್ನಾಟಕʼ ಯೋಜನೆಗೆ ಇಂದು ಚಾಲನೆ ದೊರತಿದೆ.

ಇದನ್ನೂ ಓದಿ: ಜಾತಿಗಣತಿ: ಡಿಕೆ ಶಿವಕುಮಾರ್ ಅತಿ ಬುದ್ದಿವಂತನಂತೆ ನಡೆದುಕೊಳ್ಳುತ್ತಿದ್ದಾರೆ- ಆರ್​.ಅಶೋಕ್​

2025 ರೊಳಗೆ ರಕ್ತಹೀನತೆ ಮುಕ್ತ ಕರ್ನಾಟಕ ನಿರ್ಮಾಣ ನಮ್ಮ ಗುರಿ. ಇದೇ ವರ್ಷದ ಡಿಸೆಂಬರ್ ನಿಂದಲೇ ಶಾಲಾ ಮಕ್ಕಳಿಗೆ ತಪಾಸಣೆ ಆರಂಭಿಸಲಿದ್ದೇವೆ. ಪೌಷ್ಠಿಕ ಆರೋಗ್ಯ ಸಮಾಜ ನಿರ್ಮಾಣದತ್ತ ಹೆಚ್ಚು ಗಮನ ಹರಿಸಲಿದ್ಧೇವೆ ಎಂದರು.

ಈ ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಕಲ್ಯಾಣ ಇಲಾಖೆಯ ಸಚಿವರಾದ ಶ್ರೀಮತಿ ಲಕ್ಷ್ಮಿ ಹೆಬ್ಬಾಳ್ಕರ್, ನಗರಾಭಿವೃದ್ಧಿ ಮತ್ತು ಪಟ್ಟಣ ಯೋಜನೆ ಸಚಿವರಾದ ಭೈರತಿ ಸುರೇಶ್​, ವಿರಾಜಪೇಟೆ ಶಾಸಕರಾದ ಎ.ಎಸ್ ಪೊನ್ನಣ್ಣ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳಾದ ಡಾ. ಶಾಲಿನಿ ರಜನೀಶ್​, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತರಾದ ಡಿ. ರಂದೀಪ್ ಸೇರಿದಂತೆ ಅನೇಕ ಗಣ್ಯರು, ವಿದ್ಯಾರ್ಥಿಗಳು  ಉಪಸ್ಥಿತರಿದ್ದರು.

RELATED ARTICLES

Related Articles

TRENDING ARTICLES