Thursday, January 23, 2025

ಕಾರ್ಖಾನೆಯ ಬಾಯ್ಲರ್​ಗೆ ಸಿಲುಕಿ ಕಾರ್ಮಿಕ ದಾರುಣ ಸಾವು!

ಮಂಡ್ಯ: ಬಾಯ್ಲರ್​ ಬೆಲ್ಟ್​ಗೆ ಸಿಲುಕಿ ಕಾರ್ಮಿಕನೊಬ್ಬ ಸಾವನ್ನಪ್ಪಿರುವ ಘಟನೆ ಮಂಡ್ಯದ ಮೈಶುಗರ್​ ಕಾರ್ಖಾನೆಯಲ್ಲಿ ನಡೆದಿದೆ.

ಬಿಹಾರ ಮೂಲದ ರಾಕೇಶ್​ (22), ಮೃತ ದುರ್ದೈವಿ, ಇತ್ತೀಚೆಗೆ ಕಾರ್ಖಾನೆಯಲ್ಲಿ ಕೆಲಸಕ್ಕೆ ಸೇರಿದ್ದ ರಾಕೇಶ್​ ಮಂಗಳವಾರ ರಾತ್ರಿ ನೈಟ್​ ಶಿಫ್ಟ್​ನಲ್ಲಿ ಕೆಲಸಕ್ಕೆ ಸೇರಿದ್ದ ಈತ ಇಂದು ಬೆಳಗ್ಗೆ 7.30 ರ ಸುಮಾರಿಗೆ ಬಾಯ್ಲರ್​ ಬೆಲ್ಟ್​ನಲ್ಲಿ ಬೂದಿ ತೆಗೆಯಲು ಮುಂದಾದಾಗ ಈ ಅವಘಡ ಸಂಭವಿಸಿದೆ.

ಇದನ್ನೂ ಓದಿ: ಹೋಟೆಲ್​ ಗೆ ಊಟಕ್ಕೆ ಬಂದ ಯುವತಿಗೆ ಸಿಬ್ಬಂದಿಯಿಂದ ಲೈಂಗಿಕ ಕಿರುಕುಳ!

ಸಹ ಸಿಬ್ಬಂದಿಗಳು ಗಾಯಾಳುವನ್ನು ತಕ್ಷಣವೇ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಿದರು, ಚಿಕಿತ್ಸೆ ಫಲಿಸದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಮಂಡ್ಯ ಪೂರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

RELATED ARTICLES

Related Articles

TRENDING ARTICLES