Monday, December 23, 2024

ಪ್ರೇಯಸಿಗಾಗಿ ಕಳ್ಳತನ ಮಾಡ್ತಿದ್ದ ಆರೋಪಿ ಗೋವಾದಲ್ಲಿ ಅರೆಸ್ಟ್​!

ಬೆಂಗಳೂರು: ಗೋವಿಂದರಾಜನಗರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ಬೆಂಗಳೂರು ಕಮಿಷನರ್​ ದಯಾನಂದ್​ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಕಾರ್ತಿಕ್ ಅಲಿಯಾಸ್​ ಎಸ್ಕೇಪ್​ ಕಾರ್ತಿಕ್​ ಬಂಧಿತ ಆರೋಪಿಯನ್ನು ಖಚಿತ ಮಾಹಿತಿ ಮೇರೆಗೆ ಗೋವಾದಿಂದ ಬಂಧಿಸಿ ಬೆಂಗಳೂರಿಗೆ ಕರೆತರಲಾಗಿದೆ. ಈತನೊಂದಿಗೆ ಇನ್ನಿಬರು ಸಹಚರರನ್ನು ಬಂಧಿಸಿಲಾಗಿದೆ. ಬಂಧಿತನಿಂದ 1 ಕೆಜಿ, 215 ಗ್ರಾಂ ಚಿನ್ನಾಭರಣ, 3 ಕೆಜಿ 500 ಗ್ರಾಂ ಬೆಳ್ಳಿ ಆಭರಣ ಸೇರಿದಂತೆ ಒಟ್ಟು 70ವನ್ನು ಲಕ್ಷ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿ: ಬಿಜೆಪಿ ಹೇಳಿದ್ರೆ ಕುಮಾರಸ್ವಾಮಿ ದತ್ತಮಾಲೆ ಏಕೆ ಚಡ್ಡಿನೂ ಹಾಕ್ತಾರೆ : ಸಚಿವ ಚಲುವರಾಯಸ್ವಾಮಿ

2005 ರಿಂದಲೂ ಬೆಂಗಳೂರಿನಲ್ಲಿ ಮಾತ್ರವಲ್ಲದೇ ಹೊರರಾಜ್ಯಗಳಾದ ಚನ್ನೈ, ತಿರುಪತಿ ಯಲ್ಲಿ ತನ್ನ ಕೈಚಳಕ ತೋರಿಸಿ ಪೊಲೀಸರ ಅತಿಥಿಯಾಗಿದ್ದ. ಡೋರ್ ಲಾಕ್ ಒಡೆದು ರಾತ್ರಿ ವೇಳೆ ಕೈಚಳಕ ತೋರುತ್ತಿದ್ದ ಈತ
ಈ ಹಿಂದೆ ಮೂರು ಬಾರಿ ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ, ಇದುವರೆಗೂ ಒಟ್ಟು 80 ಪ್ರಕರಣಗಳಲ್ಲಿ ಬಂಧಿತ ಆರೋಪಿ ಭಾಗಿಯಾಗಿದ್ದ. ಕಾರ್ತಿಕ್ ವಿರುದ್ದ ವಿವಿಧ ಪೊಲೀಸ್​ ಠಾಣೆಗಳಲ್ಲಿ 18 ಜಾಮೀನು ರಹಿತ ಪ್ರಕರಣಗಳು ದಾಖಲಾಗಿದೆ ಎಂದರು.

RELATED ARTICLES

Related Articles

TRENDING ARTICLES