Monday, December 23, 2024

ಕೊಟ್ಟ ಹಣ ವಾಪಾಸ್ ಕೇಳಿದ್ದಕ್ಕೆ ಮಚ್ಚಿನಿಂದ ಹಲ್ಲೆ!

ಮೈಸೂರು: ಮದುವೆಗಾಗಿ ಕೊಟ್ಟ ಸಾಲ ಹಿಂದಿರುಗಿ ಕೇಳಿದ ಕಾರಣಕ್ಕೆ ತಾಯಿ ಮಗಳ ಜೊತೆ ಅಸಭ್ಯವಾಗಿ ವರ್ತಿಸಿ ಮೊಚ್ಚಿನಿಂದ ಹಲ್ಲೆ ಮಾಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕು ಗಾಗೇನಹಳ್ಳಿ ಗ್ರಾಮದಲ್ಲಿ ನಡೆದಿದೆ.

ಘಟನೆಯಿಂದ ಯುವತಿ ಸಂಗೀತಾಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಚಿಕಿತ್ಸೆ ನೀಡಲಾಗುತ್ತಿದೆ. ಘಟನೆ ಸಂಬಂಧ ಗಂಗೇನಹಳ್ಳಿಯ ಸೀನಾ, ಶಂಕರ, ಮಂಚಮ್ಮ, ಬೋರಮ್ಮ ಹಾಗೂ ದೇವರಾಜ್ ಎಂಬುವರ ವಿರುದ್ದ  ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಎಫ್​ ಐ ಆರ್ ದಾಖಲಾಗಿದೆ.

ಇದನ್ನೂ ಓದಿ: ಅತ್ತೆ ಮನೆಗೆ ಕನ್ನ ಹಾಕಿ 40 ಲಕ್ಷ ದೋಚಿದ ಅಳಿಯ ಅರೆಸ್ಟ್​!

ಘಟನೆ ಹಿನ್ನೆಲೆ:

ಮದುವೆ ಸಮಯದಲ್ಲಿ ಸೀನಾ ಎಂಬಾತ ರಾಧ ಎಂಬುವವರ ಬಳಿ 50 ಸಾವಿರ ಸಾಲ ಪಡೆದುಕೊಂಡಿದ್ದ.
ಮದುವೆ ಮುಗಿದ ಒಂದು ತಿಂಗಳಲ್ಲಿ ಸಾಲ ಹಿಂದಿರುಗಿಸುವುದಾಗಿ ಸೀನಾ ಹೇಳಿದ್ದು. ಆದರೆ ಸಾಲ ಹಿಂದಿರುಗಿಸಲಿಲ್ಲ. ಆಗಾಗ ಸಾಲ ಕೊಟ್ಟ ರಾಧ ಮನೆಗೆ ಬಂದು ಹಣ ಹಿಂದಿರುಗಿಸುವಂತೆ ಕೇಳುತ್ತಿದ್ದರು.

ನಿನ್ನೆ ಸಹ ರಾಧ, ಸೀನನ ಮನೆ ಹತ್ತಿರ ಬಂದು ಹಣ ಕೇಳಿದಾಗ ಐವರು ಆರೋಪಿಗಳು ಅಸಭ್ಯವಾಗಿ ವರ್ತಿಸಿದ್ದಾರೆ. ರಾಧಾ ರನ್ನ ಎಳೆದಾಡಿದ್ದಾರೆ. ಈ ವೇಳೆ ರಕ್ಷಣೆಗೆ ಬಂದ ಮಗಳು ಸಂಗೀತಾ ಮೇಲೆ ಮೊಚ್ಚಿನಿಂದ ಹಲ್ಲೆ ನಡೆಸಿದ್ದಾರೆ. ಗಾಯಗೊಂಡ ಸಂಗೀತಾಗೆ ಹುಣಸೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ 5 ಆರೋಪಿಗಳ ವಿರುದ್ದ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES

Related Articles

TRENDING ARTICLES