ಹುಬ್ಬಳ್ಳಿ : ಸ್ಯಾಂಡಲ್ವುಡ್ ಯಂಗ್ ರೆಬಲ್ ಸ್ಟಾರ್ ಅಭಿಷೇಕ್ ಅಂಬರೀಶ್ ಅವರು ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಮಹತ್ವದ ಘೋಷಣೆ ಹೊರಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ತಮ್ಮ ಬ್ಯಾಡ್ ಮ್ಯಾನರ್ಸ್ ಚಿತ್ರದ ಪ್ರಚಾರದ ವೇಳೆ ಮಾತನಾಡಿರುವ ಅವರು, ನಾನು ರಾಜಕೀಯಕ್ಕೆ ಬರಲ್ಲ. ಚಿತ್ರರಂಗ ಹಾಗೂ ರಾಜಕೀಯ ರಂಗ ಬೇರೆ ಬೇರೆ. ರಾಜಕಾರಣದಲ್ಲಿ ನಾವೇ ದುಡ್ಡು ಕೊಟ್ಟು ಜನರನ್ನು ಕರೆಯಬೇಕಾಗುತ್ತದೆ ಎಂದು ಹೇಳಿದ್ದಾರೆ.
‘ನನ್ನ ತಂದೆ ಅಂಬರೀಶ್ ಅವರು 34 ವರ್ಷ ಚಿತ್ರರಂಗದಲ್ಲಿದ್ದು ಬಳಿಕ ರಾಜಕೀಯಕ್ಕೆ ಬಂದವರು. ನನ್ನ ತಾಯಿ ನಾನು ಇರೋವರೆಗೆ ರಾಜಕೀಯಕ್ಕೆ ಬರಬೇಡ ಎಂದು ಹೇಳಿದ್ದಾರೆ. ಹಾಗಾಗಿ, ನಾನು ರಾಜಕೀಯಕ್ಕೆ ಬರುವ ಉದ್ದೇಶವನ್ನೇ ಇಟ್ಟುಕೊಂಡಿಲ್ಲ, ರಾಜಕೀಯ ಕಾರ್ಯಕ್ರಮಗಳಲ್ಲೂ ಭಾಗವಹಿಸುವುದಿಲ್ಲ’ ಎಂದು ತಿಳಿಸಿದ್ದಾರೆ.
ಸೇವಾ ಕಾರ್ಯಗಳು ಇದ್ದರೆ ಮಾತ್ರ ಅಂತಹ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತೇನೆ. ರಾಜಕೀಯ ಆಡಳಿತದಲ್ಲಿ ಮಕ್ಕಳ ಹಸ್ತಕ್ಷೇಪ ಸರಿಯಲ್ಲ ಎಂದು ಅಭಿಪ್ರಾಯ ಪಟ್ಟಟ್ಟಿದ್ದಾರೆ.
ಇದು ಅಭಿಷೇಕ್ಗೆ ಬಿಟ್ಟ ವಿಚಾರ
ಅಭಿಷೇಕ್ ಅಂಬರೀಶ್ ಸ್ಪರ್ಧೆ ವಿಚಾರದ ಬಗ್ಗೆ ಈ ಹಿಂದೆ ತಾಯಿ ಸುಮಲತಾ ಸ್ಪಷ್ಟನೆ ನೀಡಿದ್ದರು. ‘ಅಭಿಷೇಕ್ ಸ್ಪರ್ಧೆ ಬಗ್ಗೆ ಜನರ ಒತ್ತಡ ಇದೆ. ಅವನು ಹೋದ ಕಡೆಯಲ್ಲಾ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡ್ತಿದ್ದಾರೆ. ಆದರೆ, ಅದು ಅಭಿಷೇಕ್ಗೆ ಬಿಟ್ಟ ವಿಚಾರ’ ಎಂದು ಹೇಳಿದ್ದರು.