Sunday, December 22, 2024

ಪೋಕ್ಸೋ ಪ್ರಕರಣ: ಮುಗುಘಾ ಮಠದ ಶಿವಮೂರ್ತಿ ಮತ್ತೆ ಅರೆಸ್ಟ್!

ಚಿತ್ರದುರ್ಗ: ಪೋಕ್ಸೋ ಪ್ರಕರಣದಲ್ಲಿ ಬಂಧನವಾಗಿ ಇತ್ತೀಚೆಗೆ ಬಿಡುಗಡೆಯಾಗಿದ್ದ ಚಿತ್ರದುರ್ಗದ ಮುರುಘಾ ಮಠದ ಡಾ. ಶಿವಮೂರ್ತಿಗೆ ಮತ್ತೆ ಸಂಕಷ್ಟ ಎದುರಾಗಿದ್ದು ಪೊಲೀಸರು ಬಂಧಿಸಲಿದ್ದಾರೆ.

ಚಿತ್ರದುರ್ಗದ 2ನೇ ಅಪರ ಜಿಲ್ಲಾ & ಸತ್ರ ನ್ಯಾಯಾಲಯದಿಂದ ಡಾ.ಶಿವಮೂರ್ತಿ ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ಮಾಡಿದ ಹಿನ್ನೆಲೆ ಯಾವುದೇ ಕ್ಷಣದಲ್ಲಿ ಶಿವಮೂರ್ತಿ ಮುರುಘಾ ಶರಣರ ಬಂಧನ  ಪೊಲೀಸರು ಆಗಮಿಸುವ ಸಾಧ್ಯತೆ ಇದೆ.

2ನೇ ಪೋಕ್ಸೋ ಕೇಸ್​ನಲ್ಲಿ ಅರೆಸ್ಟ್ ವಾರಂಟ್​​ ಜಾರಿ ಮಾಡಿದ ನ್ಯಾಯಾಲಯ​ ನ.16ರಂದು ಜಿಲ್ಲಾ ಕಾರಾಗೃಹದಿಂದ ಮುರುಘಾಶ್ರೀ ಬಿಡುಗಡೆಯಾಗಿದ್ದರು. 1ನೇ ಪೋಕ್ಸೋ ಕೇಸ್​ನಲ್ಲಿ ಹೈಕೋರ್ಟ್​ನಿಂದ ಜಾಮೀನು ಸಿಕ್ಕ ಹಿನ್ನೆಲೆ ಬಿಡುಗಡೆ ಮಾಡಲಾಗಿತ್ತು. ಈಗ ಮತ್ತೆ ಬಂಧನದ ಭೀತಿ ಎದುರಾಗಿದೆ.

ಇದನ್ನೂ ಓದಿ: 3 ದಿನಗಳ ಕಾಲ ಬೆಂಗಳೂರಿನ ಹಲವೆಡೆ ವಿದ್ಯುತ್ ವ್ಯತ್ಯಯ!

ಮುರುಘಾ ಶರಣರ ವಿರುದ್ಧ ಅರೆಸ್ಟ್ ವಾರಂಟ್ ಜಾರಿ ವಿಚಾರ ಸಂಬಂಧ ಮುರುಘಾ ಶ್ರೀ ಆಪ್ತ, ಮಾಜಿ ಶಾಸಕ ಶಿವಶಂಕರ್‌ ಪ್ರತಿಕ್ರಿಯೆ ನೀಡಿದ್ದು. ಕಾನೂನಿಗೆ ತಲೆಬಾಗಲು ಮುರುಘಾ ಶ್ರೀಗಳು ಸಿದ್ಧರಿದ್ದಾರೆ. ಎಲ್ಲವನ್ನೂ ಎದುರಿಸಲು ಮುರುಘಾ ಶ್ರೀಗಳು ಸಿದ್ಧರಿದ್ದಾರೆ. ಕೋರ್ಟ್‌ ವಾರಂಟ್ ಜಾರಿ ಮಾಡುತ್ತೆಂದು ನಿರೀಕ್ಷಿಸಿರಲಿಲ್ಲ. ಮುರುಘಾಶ್ರೀಗಳು ಆರೋಪಿ ಅಷ್ಟೇ, ಅಪರಾಧಿಯಲ್ಲ. ಮತ್ತೊಮ್ಮೆ ಸಂಕಷ್ಟ ಎದುರಾಗಿದೆ, ಎದುರಿಸಲು ಸಿದ್ಧರಾಗಿದ್ದಾರೆ ಎಂದರು.

RELATED ARTICLES

Related Articles

TRENDING ARTICLES