Friday, November 22, 2024

ನ.23ರಿಂದ 3 ದಿನ ಕರ್ನಾಟಕದಲ್ಲಿ ಮಳೆ ಸಾಧ್ಯತೆ!

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಹಿಂಗಾರು ಚುರುಕುಗೊಳ್ಳಲಿದ್ದು, ನ.23ರಿಂದ ಮೂರು ದಿನ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಕಳೆದ ಒಂದು ವಾರದಿಂದ ರಾಜ್ಯದಲ್ಲಿ ಒಣಹವೆ ವಾತಾವರಣ ಕಂಡು ಬಂದಿದೆ, ಹಿಂಗಾರು ಮಳೆ ಸಹ ಕ್ಷೀಣವಾಗಿತ್ತು. ಇದೀಗ ನ.23 ರಿಂದ ನ.26ರ ವರೆಗೆ ದಕ್ಷಿಣ ಒಳನಾಡು, ಕರಾವಳಿ ಜಿಲ್ಲೆಗಳು ಹಾಗೂ ಉತ್ತರ ಒಳನಾಡಿನ ಕೆಲವಡೆ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಇದನ್ನೂ ಓದಿ: ಹಿಂದುತ್ವ ಎಂದರೆ ದಲಿತರನ್ನು ಹೊರಗಿಡುವ ಜಾತಿತ್ವ: ಸಚಿವ ಮಹವೇವಪ್ಪ!

ದಕ್ಷಿಣ ಒಳನಾಡಿನ ಕೊಡಗು ಹಾಗೂ ಚಿಕ್ಕಮಗಳೂರಿನಲ್ಲಿ ನ.23 ಹಾಗೂ 24ರಂದು ಭಾರೀ ಮಳೆಯಾಗುವ ಸಾಧ್ಯತೆ ಇರುವುದರಿಂದ ಈ ಎರಡು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಎಚ್ಚರಿಕೆ ನೀಡಲಾಗಿದೆ.

RELATED ARTICLES

Related Articles

TRENDING ARTICLES