Wednesday, January 22, 2025

ಭಾರತದ 3ನೇ ವಿಕೆಟ್ ಪತನ : ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್ ಔಟ್​

ಬೆಂಗಳೂರು : ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತದ ಮತ್ತೊಂದು ವಿಕೆಟ್ ಪತನವಾಗಿದೆ.

31 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 4 ಬೌಂಡರಿಗಳೊಂದಿಗೆ 47 ರನ್​ ಗಳಿಸಿದ್ದ ನಾಯಕ ರೋಹಿತ್ ಶರ್ಮಾ ಔಟಾದರು.

ಗ್ಲೆನ್ ಮ್ಯಾಕ್ಸ್​ವೆಲ್ ಎಸೆದ 10ನೇ ಓವರ್​ನ 4ನೇ ಎಸೆತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾದ ರೋಹಿತ್ ಶರ್ಮಾ ಅವರು ಟ್ರಾವಿಸ್ ಹೆಡ್ ಹಿಡಿದ ಅದ್ಭುತ ಕ್ಯಾಚ್​ಗೆ ಬಲಿಯಾದರು. ಬಳಿಕ ಬಂದ ಶ್ರೇಯಸ್​ ಅಯ್ಯರ್ ಒಂದು ಬೌಂಡರಿ ಬಾರಿಸಿ ಬಂದ ಹಾದಿಯಲ್ಲೇ ಪೆವಿಲಿಯನ್​ನತ್ತ ಹೆಜ್ಜೆ ಹಾಕಿದರು.

ಆಸಿಸ್ ನಾಯಕ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್​ನಲ್ಲಿ ಅಯ್ಯರ್ ಕೀಪರ್ ಇಂಗ್ಲಿಸ್​ಗೆ ಕ್ಯಾಚ್ ನೀಡಿದರು. ಪ್ರಸ್ತುತ ಭಾರತ 11.4 ಓವರ್​ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 86 ರನ್​ ಗಳಿಸಿದೆ. ವಿರಾಟ್ ಕೊಹ್ಲಿ 25 ರನ್ ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ 3 ರನ್​​ ಗಳಿಸಿ ಕ್ರೀಸ್​ನಲ್ಲಿದ್ದಾರೆ.

RELATED ARTICLES

Related Articles

TRENDING ARTICLES