ಬೆಂಗಳೂರು : ಆಸ್ಟ್ರೇಲಿಯಾ ವಿರುದ್ಧದ ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ಭಾರತ ತಂಡ ನಿಗದಿತ 50 ಓವರ್ಗಳಲ್ಲಿ ಸರ್ವಪತನ ಕಂಡು 241 ರನ್ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುತ್ತಿರುವ ವಿಶ್ವಕಪ್-2023 ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕಮ್ಮಿನ್ಸ್ ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡರು.
ಇನ್ನಿಂಗ್ಸ್ ಆರಂಭಿಸಿದ ಭಾರತಕ್ಕೆ ಆಸಿಸ್ ಬೌಲರ್ಗಳು ಮೇಲಿಂದ ಮೇಲೆ ಶಾಕ್ ನೀಡಿದರು. ಆರಂಭಿಕ ಆಟಗಾರ ಶುಭ್ಮನ್ ಗಿಲ್ ಕೇವಲ 4 ರನ್ ಗಳಿಸಿ ಔಟಾದರು. 47 ರನ್ ಗಳಿಸಿ ಆರ್ಭಟಿಸುವ ಸೂಚನೆ ನೀಡಿದ್ದ ನಾಯಕ ರೋಹಿತ್ ಶರ್ಮಾ ಕೂಡ ಬೇಗನೇ ಮೈದಾನದಿಂದ ನಿರ್ಗಮಿಸಿದರು. ಬಳಿಕ ಬಂದ ಶ್ರೇಯಸ್ ಅಯ್ಯರ್ 4 ರನ್ ಗಳಿಸಿ ಔಟಾದರು.
ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ವಿರಾಟ್ ಕೊಹ್ಲಿ ಹಾಗೂ ಕೆ.ಎಲ್. ರಾಹುಲ್ ಆಸರೆಯಾದರು. ವಿರಾಟ್ ಕೊಹ್ಲಿ ಅರ್ಧಶತಕ (54) ಹಾಗೂ ಕನ್ನಡಿಗ ಕೆ.ಎಲ್. ರಾಹುಲ್ ಅರ್ಧಶತಕ (66) ಸಿಡಿಸಿ ಆಪದ್ಬಾಂಧವರಾದರು. ಬಳಿಕ ಬಂದ ಬ್ಯಾಟರ್ಗಳು ಆಸಿಸ್ ಬೌಲರ್ಗಳನ್ನು ಸಮರ್ಥವಾಗಿ ಎದುರಿಸುವಲ್ಲಿ ವಿಫಲರಾದರು.
ಕೆಟ್ಟ ಪ್ರದರ್ಶನ ನೀಡಿದ ಸೂರ್ಯ
ಸಂಕಷ್ಟದಲ್ಲಿದ್ದ ಭಾರತಕ್ಕೆ ಸುರ್ಯಕುಮಾರ್ ಯಾದವ್ ಆಸರೆಯಾಗಬೇಕಿತ್ತು. ಆದರೆ, ಆಸಿಸ್ ವೇಗಿಗಳ ದಾಳಿಗೆ ರನ್ ಗಳಿಸಲು ಸೂರ್ಯ ತುಣುಕಾಡಿದರು. 28 ಎಸೆತಗಳಲ್ಲಿ ಕೇವಲ 18 ರನ್ ಗಳಿಸಿ ಔಟಾದರು.