ಮಂಗಳೂರು: ಜಾತಿ, ಧರ್ಮ ರಾಜಕೀಯವನ್ನು ಬಿಟ್ಟ ಸ್ಚೀಕರ್ ಸ್ಥಾನವನ್ನು ಗೌರವದಿಂದ ನೋಡಬೇಕು ಎಂದು ಸ್ಪೀಕರ್ ಯು.ಟಿ.ಖಾದರ್ ಹೇಳಿದ್ದಾರೆ.
ಮಂಗಳೂರಿನಲ್ಲಿ ಮಾತನಾಡಿದ ಅವರು, ರಾಜಕೀಯ, ಜಾತಿ ಧರ್ಮದಿಂದ ಸ್ಪೀಕರ್ ಸ್ಥಾನ ನೋಡುವಂತಿಲ್ಲ. ನನಗೆ ಗೌರವ ಕೊಡುವುದು ಖಾದರ್ಗೆ ಗೌರವ ಕೊಟ್ಟಂತೆ ಅಲ್ಲ. ಸಂವಿಧಾನ ಪೀಠ ಮತ್ತು ಸಭಾಧ್ಯಕ್ಷ ಸ್ಥಾನಕ್ಕೆ ಸಿಕ್ಕಂತಹ ಗೌರವ ಎಂದರು
ಇದನ್ನೂ ಓದಿ: ಕನಕಪುರದಲ್ಲಿ ಹೀನಾಯವಾಗಿ ಸೋತವರು ಈಗ ವಿಪಕ್ಷ ನಾಯಕ : ಕಾಂಗ್ರೆಸ್ ಟೀಕೆ
ಸ್ಪೀಕರ್ ಖಾದರ್ ಮುಂದೆ ಬಿಜೆಪಿ ಶಾಸಕರು ತಲೆಬಾಗಿ ನಮಸ್ಕರಿಸ್ತಾರೆ ಎಂದು ತೆಲಂಗಾಣದಲ್ಲಿ ಪ್ರಚಾರ ಮಾಡುವ ವೇಳೆ ಮುಸ್ಲಿಮರನ್ನ ಹೊಗಳುವ ಭರದಲ್ಲಿ ಎಡವಟ್ಟು ಹೇಳಿಕೆ ನೀಡಿದ ಜಮೀರ್ ಅಹ್ಮದ್ ಹೇಳಿಕೆಗೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು ನಾನು ಯಾರ ಹೇಳಿಕೆಗೂ ನಾನು ಪ್ರತಿಕ್ರಿಯೆ ಕೊಡಲ್ಲ ಸಂವಿಧಾನಕ್ಕೆ ಅನುಗುಣವಾಗಿ ನಾನು ಕೆಲಸ ಮಾಡುತ್ತೇನೆ. ನಾನು ಎಲ್ಲರಿಗೂ ಗೌರವ ಕೊಟ್ಟು ಗೌರವ ಪಡೆಯುತ್ತೇನೆ. ಜಾತಿ, ಧರ್ಮ ಬಿಟ್ಟು ಸ್ಪೀಕರ್ ಸ್ಥಾನ ನೋಡಬೇಕು ಎಂದರು.