Monday, December 23, 2024

ಅಶೋಕ್ ವಿಪಕ್ಷ ನಾಯಕನಾದ್ರೆ, ಅದಕ್ಕೆ ನಾನೇನು ಮಾಡಲಿ : ಸಿಎಂ ಸಿದ್ದರಾಮಯ್ಯ

ಮೈಸೂರು : ಆರ್. ಅಶೋಕ್ ಅವರು ವಿಪಕ್ಷ ನಾಯಕರಾಗಿ ಆಯ್ಕೆಯಾಗಿರುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ.

ಮೈಸೂರಿನ ಟಿ.ಕೆ. ಬಡಾವಣೆ ‌ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಅಶೋಕ್ ಅವರು ವಿಪಕ್ಷ ನಾಯಕರಾದರೆ ಅದಕ್ಕೆ ನಾನೇನು ಮಾಡಲಿ. ನಮಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

ನಾವು ಜನರಿಗೆ ಕೊಟ್ಟಿರುವ ಗ್ಯಾರಂಟಿ ಯೋಜನೆಗಳಿವೆ. ನಮ್ಮ ಉದ್ದೇಶ ರಾಜ್ಯದಲ್ಲಿ ಶಾಂತಿಯ ವಾತಾವರಣ ನಿರ್ಮಾಣವಾಗಬೇಕು ಎನ್ನುವುದು. ದ್ವೇಷದ ರಾಜಕಾರಣ ನಿಲ್ಲಬೇಕು. ನಾವು ಎಲ್ಲಾ ಆಶ್ವಾಸನೆಗಳನ್ನ ಈಡೇರಿಸಬೇಕು. ಅವರು ಯಾರನ್ನಾದರೂ ಅಧ್ಯಕ್ಷ, ವಿಪಕ್ಷ ನಾಯಕನನ್ನಾಗಿ ಮಾಡಲಿ ನಮಗೂ ಅದಕ್ಕೂ ಸಂಬಂಧವಿಲ್ಲ ಎಂದು ಕುಟುಕಿದ್ದಾರೆ.

ವಿವೇಕಾನಂದರ ಬಗ್ಗೆ ಗೊತ್ತಾ?

ರಾಜ್ಯದಲ್ಲಿ ವರ್ಗಾವಣೆ ದಂಧೆ ವಿಚಾರ ಕುರಿತು ಮಾತನಾಡಿ, ವಿಪಕ್ಷದವರು ಹೇಳಿದ್ದನ್ನೆಲ್ಲ‌ ನಾವು ಕೇಳಬೇಕೆಂಬುದಲ್ಲ. ಅಸೆಂಬ್ಲಿಯಲ್ಲಿ ಇದಕ್ಕೆಲ್ಲ ಉತ್ತರ ನೀಡಬೇಕು, ಅಲ್ಲಿಯೇ ಅವರಿಗೆ ಉತ್ತರ ನೀಡ್ತೀವಿ. ವಿಡಿಯೋದಲ್ಲಿ ಮಾತನಾಡಿರುವ ವಿವೇಕಾನಂದರ ಬಗ್ಗೆ ಗೊತ್ತಾ? ವಿವೇಕಾನಂದ ಮೈಸೂರು ತಾಲೂಕು‌ ಬಿಇಓ. ಬಿಇಓ ವಿವೇಕಾನಂದರ ಬಗ್ಗೆ ವಿಡಿಯೋದಲ್ಲಿ ಮಾತನಾಡಿರುವುದು. ವಿವೇಕಾನಂದ ಟ್ರಾನ್ಸ್ ಫರ್ ಆಗಿರುವುದು ಚಾಮರಾಜ ಕ್ಷೇತ್ರಕ್ಕೆ, ಆ ವಿಚಾರವನ್ನ ಚಾಮರಾಜ ಕ್ಷೇತ್ರದ ಶಾಸಕರನ್ನೇ ಕೇಳಿ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.

ಸಮ್ಮಿಶ್ರ ಸರ್ಕಾರ ನಡೆಸಲು ಚಿಂತಿಸಿದ್ರು

ಚಿಕ್ಕಮಗಳೂರಲ್ಲಿ ಕಾಂಗ್ರೆಸ್ ವಿರುದ್ಧ ಪೋಸ್ಟರ್ ಚಳವಳಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಜನರು ಈಗಾಗಲೇ ಅವರಿಗೆ ಪಾಠ ಕಲಿಸಿದ್ದಾರೆ. ವಿಪಕ್ಷ‌ ಸ್ಥಾನದಲ್ಲಿ ಕೂತುಕೊಳ್ಳಿ ಅಂತ ಕೂರಿಸಿದ್ದಾರೆ. ಬಿಜೆಪಿ, ಜೆಡಿಎಸ್ ಅಧಿಕಾರಕ್ಕೆ ಬಂದೇ ಬರ್ತೀವಿ ಅಂತಿದ್ರು. ಸಮ್ಮಿಶ್ರ ಸರ್ಕಾರ ನಡೆಸಲು ಚಿಂತನೆಯಲ್ಲಿದ್ದರು. ಸದ್ಯ ಅಧಿಕಾರಕ್ಕೆ ಬರದೇ ಇರುವುದಕ್ಕೆ ಡೆಸ್ಪರೇಟ್ ಆಗಿದ್ದಾರೆ ಎಂದು ವಿಪಕ್ಷಗಳಿಗೆ ತಿರುಗೇಟು ನೀಡಿದ್ದಾರೆ.

RELATED ARTICLES

Related Articles

TRENDING ARTICLES