Thursday, January 9, 2025

ಒಬ್ಬರಿಂದ ಹೇಗೆ ರೇಪ್ ಮಾಡಲು ಸಾಧ್ಯ? : ನಾಲಿಗೆ ಹರಿಬಿಟ್ಟ ಕಾಂಗ್ರೆಸ್ ಮಾಜಿ ಶಾಸಕ

ಕೊಪ್ಪಳ : ನಿಮ್ಮದೇ ಪಕ್ಷದ ಮುಖಂಡನಿಂದ ಅತ್ಯಾಚಾರ ನಡೆದಿದೆ ನ್ಯಾಯ ಕೊಡಿಸಿ ಎಂದು ಕೇಳಿದ ಸಂತ್ರಸ್ತೆ ಪತಿಗೆ ಕಾಂಗ್ರೆಸ್​ ಮಾಜಿ ಶಾಸಕ ‘ಒಬ್ಬರಿಂದ ಹೇಗೆ ರೇಪ್ ಮಾಡಲು ಸಾಧ್ಯ?’ ಎಂದು ನಾಲಿಗೆ ಹರಿಬಿಟ್ಟಿದ್ದಾರೆ.

ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಶಾಸಕ ಅಮರೇಗೌಡ ಲಿಂಗನಗೌಡ ಪಾಟೀಲ್ ಬಯ್ಯಾಪುರ ಅವರ ಮಾತು ಕೇಳಿದ್ರೆ ನೀವು ದಂಗಾಗೋದು ಗ್ಯಾರಂಟಿ.

ಕುಷ್ಟಗಿ ತಾಲೂಕಿನ ಎಂ. ಗುಡದೂರು ಗ್ರಾಮದಲ್ಲಿ ಮಹಿಳೆಯ ಮೇಲೆ ಕಾಂಗ್ರೆಸ್ ಮುಖಂಡನಿಂದ ಅತ್ಯಾಚಾರ ಆರೋಪ ಕೇಳಿಬಂದಿದೆ. ಕಾಂಗ್ರೆಸ್ ಮುಖಂಡ ಸಂಗನಗೌಡ ವಿರುದ್ಧ ಸಂತ್ರಸ್ಥ ಮಹಿಳೆ ಅತ್ಯಾಚಾರ ಆರೋಪ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾದರೂ ಪೊಲೀಸರು ಕ್ರಮ ಜರುಗಿಸಲು ಮೀನಾಮೇಷ ಎಣಿಸುತ್ತಿದ್ದಾರೆ.

ಈ ಬಗ್ಗೆ ಸಂತ್ರಸ್ಥ ಮಹಿಳೆ ಪತಿಯಿಂದ ನ್ಯಾಯಕ್ಕೆ ಎಸ್ಪಿ, ಮಾಜಿ ಶಾಸಕರಿಗೆ ಮನವಿ ಮಾಡಲಾಗಿದೆ. ಈ ವೇಳೆ ಮಾಜಿ ಶಾಸಕ ಅಮರೇಗೌಡ ಬಯ್ಯಾಪುರ ‘ಒಬ್ಬರಿಂದ ಹೇಗೆ ರೇಪ್ ಮಾಡಲು ಸಾಧ್ಯ?’ ಎಂದು ಸಂತ್ರಸ್ಥೆ ಪತಿಗೆ ಪ್ರಶ್ನಿಸಿದ್ದಾರೆ.

ಒಬ್ಬನ ಕೈಯಲ್ಲಿ ರೇಪ್ ಮಾಡಲು ಸಾಧ್ಯವಿಲ್ಲ

ಜಗತ್ತಿನಲ್ಲಿ ಒಬ್ಬನ ಕೈಯಲ್ಲಿ ರೇಪ್ ಮಾಡಲು ಸಾಧ್ಯವಿಲ್ಲ. ಎರಡು ಕೈ ತಟ್ಟಿದ್ರೆನೇ ಚಪ್ಪಾಳೆ ಆಗೋದು. ಒಂದು ಕೈಯಿಂದ ಚಪ್ಪಾಳೆ ಸಾಧ್ಯಾನಾ? ಸೂಕ್ಷ್ಮ ವಿಚಾರ ಇದು, ಮರ್ಯಾದೆ ಪ್ರಶ್ನೆ ಇದೆ, ಯೋಚಿಸು ಎಂದು ಅಮರೇಗೌಡ ಬಯ್ಯಾಪುರ ಸಲಹೆ ನೀಡಿದ್ದಾರೆ. ದಯವಿಟ್ಟು ನ್ಯಾಯ ಕೊಡಿಸಿ ಎಂದು ಸಂತ್ರಸ್ಥೆ ಪತಿ ಮಾಜಿ ಶಾಸಕರಿಗೆ ಮನವಿ ಮಾಡಿದ್ದಾರೆ.

RELATED ARTICLES

Related Articles

TRENDING ARTICLES