ತುಮಕೂರು: ಸಚಿವ ಕೃಷ್ಣಬೈರೇಗೌಡ ತುರುವೇಕೆರೆ ತಾಲೂಕು ಕಚೇರಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದಕ್ಕೆ ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿದ್ದಾರೆ.
ರೈತರು ಹಾಗೂ ಸಾರ್ವಜನಿಕರು ಸಾಲು ಸಾಲು ಸಮಸ್ಯೆ ಸಚಿವರ ಮುಂದೆ ಹೇಳಿಕೊಂಡರು. ಇದೇ ವೇಳೆ, ಜಮೀನಿನಲ್ಲಿ ಓಡಾಡಲು ನಮಗೆ ರಸ್ತೆ ಇಲ್ಲ ಎಂದು ರೈತರೊಬ್ಬರು ಅಳಲು ತೋಡಿಕೊಂಡರು. ರೈತರೊಬ್ಬರು ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂದು ದೂರು ನೀಡಿದಾಗ, ಜನರ ಎದುರೇ ಅಧಿಕಾರಿಗಳಿಗೆ ಸಚಿವರು ಕ್ಲಾಸ್ ತೆಗೆದುಕೊಂಡರು.
ಇದನ್ನೂ ಓದಿ: ಕೃಷಿ ಮೇಳಕ್ಕೆ ಚಾಲನೆ ನೀಡಿದ ಸಿಎಂ ಸಿದ್ದರಾಮಯ್ಯ: ಈ ಬಾರಿಯ ಆಕರ್ಷಣೆಗಳೇನು?
ತಹಶೀಲ್ದಾರ್‌ಗೆ ಸಚಿವರು ಕ್ಲಾಸ್
ಈ ವೇಳೆ ತಹಶೀಲ್ದಾರ್ ಅವರು ಐದು ಬಾರಿ ನೊಟೀಸ್ ನೀಡಿದ್ದೇನೆ ಎಂದು ಉತ್ತರ ನೀಡಿದರು. ಐದು ನೊಟೀಸ್ ನೀಡಿ ಇನ್ನೂ ಏತಕ್ಕೆ ಕಾಯ್ತಾ ಇದ್ದೀರಿ ಎಂದು ತಹಶೀಲ್ದಾರ್‌ಗೆ ಸಚಿವರು ಕ್ಲಾಸ್ ತೆಗೆದುಕೊಂಡರು. ಅಲ್ಲದೇ ಈ ಕೂಡಲೇ ದಾರಿ ತೆರವುಗೊಳಿಸುವಂತೆ ತಹಶೀಲ್ದಾರ್ ರೇಣುಕುಮಾರ್‌ಗೆ ಸೂಚನೆ ನೀಡಿದರು.