Wednesday, January 22, 2025

ಪ್ರತಿಪಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೇ ಬೇಕು : ಯತ್ನಾಳ್ ಪಟ್ಟು

ಬೆಂಗಳೂರು: ಉತ್ತರ ಕರ್ನಾಟಕದವರಿಗೆ ವಿಪಕ್ಷ ಸ್ಥಾನ ನೀಡಬೇಕು. ಎಲ್ಲವೂ ದಕ್ಷಿಣ ಕರ್ನಾಟಕಕ್ಕೆ ಸೀಮಿತವಾಗಬೇಕಾ? ಎಂದು ವಿಪಕ್ಷನ ಆಯ್ಕೆ ವಿಷಯದಲ್ಲಿ ಧ್ವನಿ ಎತ್ತಿದ್ದಾರೆ.

ರಾಜ್ಯ ಬಿಜೆಪಿಗೆ ಹೊಸ ಸಾರಥಿ ನೇಮಕವಾಗುತ್ತಿದ್ದಂತೆಯೇ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ‘ಒಂದು ಪಕ್ಷ ಒಂದು ಕುಟುಂಬಕ್ಕೆ ಸೀಮಿತವಾಗಬಾರದು. ಇಂದಿನ ಶಾಸಕಾಂಗ ಸಭೆಯಲ್ಲಿ ನಾನು ನನ್ನ ವಾದ ಮಂಡಿಸುತ್ತೇನೆ. ನಾನು ಉತ್ತರ ಕರ್ನಾಟಕ, ಹಿಂದುತ್ವ ಹಿನ್ನೆಲೆಯ ನಾಯಕ. ಜೀ ಹುಜೂರ್ ಎನ್ನುವ ಸಂಸ್ಕೃತಿ ನಮ್ಮದಲ್ಲ. ಎಂದು ಪ್ರಶ್ನಿಸಿದ್ದಾರೆ.

ಇದನ್ನೂ ಓದಿ: ಎಂಪಿ ದೇವೇಂದ್ರಪ್ಪ ಪುತ್ರನಿಂದ ಯುವತಿಗೆ ವಂಚನೆ; ಅವನಿಗೆ 42, ಅವಳಿಗೆ 24 ಏನಿದು ಲವ್ವಿಡವ್ವಿ?

ವಿಜಯೇಂದ್ರ ಅವರು ತಮ್ಮನ್ನು ಮಾತನಾಡಿಸಲು ಬರುವ ಅಗತ್ಯವಿಲ್ಲ. ಅವರು ತಮ್ಮ ಮನೆಗೆ ಕಾಲಿಡುವುದು ಬೇಡ ಎಂದು ಯತ್ನಾಳ್ ರಾಜ್ಯ ಬಿಜೆಪಿ (BJP) ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್​ ಅವರಿಗೆ ಕರೆ ಮಾಡಿ ತಿಳಿಸಿದ್ದಾರೆ. ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಅವರ ನಿವಾಸದಲ್ಲಿದ್ದಾಗಲೇ ಯತ್ನಾಳ್ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೀಕ್ಷಕರಿಗೆ ಎಲ್ಲ ತಿಳಿಸಿದ್ದೇನೆ: ಯತ್ನಾಳ್

ಹೈಕಮಾಂಡ್ ವೀಕ್ಷಕರನ್ನು ಭೇಟಿ ಮಾಡಿದ ಬಗ್ಗೆ ಮಾಹಿತಿ ನೀಡಿದ ಅವರು, ಚುನಾವಣೆ ವೇಳೆ ಆಗಿರುವ ಬೆಳವಣಿಗೆ ಬಗ್ಗೆ ಎಲ್ಲವನ್ನೂ ವಿವರಿಸಿದ್ದೇನೆ. ಒಂದು ವರ್ಗದ ಕೇಂದ್ರೀಕೃತವಾಗಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಹೈಕಮಾಂಡ್ ವೀಕ್ಷಕರಿಗೆ ರಾಜ್ಯದ ಎಷ್ಟೋ ವಿಷಯಗಳು ಗೊತ್ತಿರಲಿಲ್ಲ. ಧೈರ್ಯದಿಂದ ನಾನು ಎಲ್ಲವನ್ನೂ ಹೇಳಿದ್ದೇನೆ. ದೇಶದಲ್ಲಿ ನಾವು ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿ ಆಗಬೇಕು. ವರಿಷ್ಠರು ಕೆಲವೇ ಚೇಲಾಗಳ ಮಾತುಕೇಳಿ ನಿರ್ಧಾರ ತೆಗೆದುಕೊಳ್ಳಬಾರದು.

 

RELATED ARTICLES

Related Articles

TRENDING ARTICLES