Sunday, January 19, 2025

ರೇವಣ್ಣ ಹೃದಯವಂತ, ಅವರಿಗೆ ಏನು ಗೊತ್ತಿದೆ? : ಹೆಚ್.ಡಿ. ಕುಮಾರಸ್ವಾಮಿ

ಬೆಂಗಳೂರು : ಸಿಎಂ ಸಿದ್ದರಾಮಯ್ಯರ ಪುತ್ರ ಯತೀಂದ್ರ ಪರ ಬ್ಯಾಟ್ ಬೀಸಿರುವ ಹೆಚ್​.ಡಿ. ರೇವಣ್ಣ ನಡೆ ಬಗ್ಗೆ ಮಾಜಿ ಸಿಎಂ ಹಾಗೂ ಸಹೋದರ ಹೆಚ್.ಡಿ. ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ರೇವಣ್ಣರಿಗೆ ಏನು ಗೊತ್ತಿದೆ? ಅವರಿಗೆ ಹೃದಯ ವೈಶಾಲ್ಯತೆ ಇದೆ, ನಾವು ಏನು ಮಾಡೋದು? ಎಂದು ಹೇಳಿದ್ದಾರೆ.

ಬೆಳಗ್ಗೆ ಅಷ್ಟೊಂದು ಸುದ್ದಿಯಾಯ್ತ, ಮೂರು ಗಂಟೆಯವರೆಗೂ ಯಾಕೆ ದಾಖಲೆ ರಿಲೀಸ್ ಮಾಡಿಲ್ಲ. ಎರಡುವರೆ ಲಕ್ಷ ಸಿಎಸ್​ಆರ್ ಪಂಢ್ ತೆಗೆದುಕೊಳ್ಳುತ್ತಿರಾ? ನಾನು ವಿಧಾನಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸುತ್ತೆನೆ. ಡುಬ್ಲಿಕೇಟ್ ಸಿಎಂಗೆ ಸಿಎಸ್​ಆರ್ ಪಂಡ್​ಗೆ ತುಂಬಾನೆ ಇಷ್ಟ(ಡಿಕೆಶಿಗೆ). ವಿವೇಕಾನಂದ ಅಂದ್ರೆ ಯಾರು ಅಂತಾರೆ, ಬಿಇಓ ಹೆಸರು ಗೊತ್ತಿಲ್ವಾ? ಎಂದು ಸಿಎಂ ಸಿದ್ದರಾಮಯ್ಯಗೆ ಚಾಟಿ ಬೀಸಿದ್ದಾರೆ.

ಪೆನ್ ಡ್ರೈ ತೋರಿಸಿದ್ದಕ್ಕೆ ನಿದ್ದೆಕೆಟ್ಟರು

ವರ್ಗಾವಣೆದು ಅಲ್ಲ ಅಂತಿರಿ, ಒಪ್ಪಿಕೊಳ್ಳುತ್ತೇನೆ. ಶಾಸಕ ಆಗದಿದ್ರೂ ಜನರಿಗೋಸ್ಕರ ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ ಅಂತ ಹೇಳಿಕೊಂಡಿದ್ದಾರೆ. ಹತಾಶೆಯಿಂದ ಮಾನಸಿಕ ಸ್ಥಿಮಿತ ಕಳೆದುಕೊಂಡಂತೆ ಆಗಿದ್ದಾರೆ ಎಂದು ಕಾಂಗ್ರೆಸ್ ‌ಮಹಾನಾಯಕರು ಹೇಳಿದ್ದಾರೆ. ಸಮ್ಮಿಶ್ರ ‌ಸರ್ಕಾರದಲ್ಲಿ ಸಮನ್ವಯ ಸಮಿತಿ ಅಧ್ಯಕ್ಷರು ಇದ್ದೀರಿ. ಸದಾ ಕಾಲ ವರ್ಗಾವಣೆ ‌ದಂಧೆಯಲ್ಲಿದ್ರಿ ಅಂತ ಹೇಳಿದ್ರಿ. ಆದ್ರೆ, ನೀವು ಸಮನ್ವಯ ಅಧ್ಯಕ್ಷರಾಗಿ ಸಭೆಯಲ್ಲಿ ಪ್ರಸ್ತಾಪ ಮಾಡಿದ್ರಾ? ಎಂದು ಪ್ರಶ್ನಿಸಿದ್ದಾರೆ.

ಪೆನ್ ಡ್ರೈ ತೋರಿಸಿದಾಗ ನಿಮ್ಮ ಮಂತ್ರಿಗಳು, ಅಣ್ಣ ನಿಮ್ಮ ಬಗ್ಗೆ ಪ್ರೀತಿಯಿದೆ. ದಯವಿಟ್ಟು ಬೇಡ ಅಣ್ಣ ಅಂತ ನಿಮ್ಮ ಮಂತ್ರಿಗಳು ಬಂದರು. ಪೆನ್ ಡ್ರೈ ತೋರಿಸಿದ್ದಕ್ಕೆ ನಿದ್ದೆಕೆಟ್ಟರು ಎಂದು ಕುಮಾರಸ್ವಾಮಿ ಕುಟುಕಿದ್ದಾರೆ.

RELATED ARTICLES

Related Articles

TRENDING ARTICLES