ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿಯಲ್ಲೊಂದು ಗೃಹಲಕ್ಷ್ಮಿ ಯೋಜನೆಯ ಹಣ ಇನ್ಮುಂದೆ ಫಲಾನುಭವಿಗಳಿಗೂ ಮೊದಲು ಹರಕೆಯ ಮೂಲಕ ಪ್ರತಿ ತಿಂಗಳು ನಾಡದೇವತೆ ಚಾಮುಂಡೇಶ್ವರಿ ಅರ್ಪಣೆ ಮಾಡಲಾಗುತ್ತದೆ.
ಈ ಸಂಬಂಧ ಕಾಂಗ್ರೆಸ್ ಶಾಸಕ ದಿನೇಶ್ ಗೂಳಿಗೌಡ ಅವರು ಮುಖ್ಯಮಂತ್ರಿ ಸಿದ್ಧರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅವರಿಗೆ ಪತ್ರ ಬರೆದಿದ್ದರು. ಈ ಪತ್ರಕ್ಕೆ ಡಿಸಿಎಂ ಡಿ.ಕೆ ಶಿವಕುಮಾರ್ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ. ಈ ಬಗ್ಗೆ ಸೂಕ್ತ ಕ್ರಮಕ್ಕೆ ಸೂಚಿಸಿದ್ದಾರೆ.
ಈ ಹಿನ್ನಲೆಯಲ್ಲಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಫಲಾನುಭವಿಗಳಿಗೆ ಜಮಾಗೂ ಮುನ್ನಾ, ಗೃಹಲಕ್ಷ್ಮಿ ಯೋಜನೆಯ 2000 ಹಣವನ್ನು ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ ಹರಕೆಯ ರೂಪದಲ್ಲಿ ಅರ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಲಿದ್ದಾರೆ ಎನ್ನಲಾಗುತ್ತಿದೆ.
ಇದನ್ನೂ ಓದಿ: ಜಮೀರ್ ಹೇಳಿಕೆಗೆ ಗರಂ ಆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ!
ಈ ಯೋಜನೆಯನ್ನ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ನಾಡಿನ ಅಧಿದೇವತೆ ಚಾಮುಂಡೇಶ್ವರಿಗೆ 2000 ರೂ ಹರಕೆಯ ರೂಪದಲ್ಲಿ ಸಲ್ಲಿಸೋ ಮೂಲಕ ಆರಂಭಿಸಲಾಗಿತ್ತು. ಹೀಗಾಗಿ ಇನ್ಮುಂದೆ ಮೊದಲು ಫಲಾನುಭವಿಗಳಿಗೆ 2000 ಹಣ ಜಮಾಗೂ ಮುನ್ನಾ ಚಾಮುಂಡೇಶ್ವರಿಗೆ ಹರಕೆಯ ರೂಪದಲ್ಲಿ ಸರ್ಕಾರ ಅರ್ಪಣೆ ಮಾಡಲಿದೆ.