ಹೈದರಾಬಾದ್: ಡಿಜಿಟಲ್ ಪಾವತಿ ಆ್ಯಪ್ಗಳ ವಿರುದ್ದ ಹೈದರಾಬ್ ಮೂಲದ ಹೋರಾಟಗಾರ್ತಿ ದೂರು ದಾಖಲಿಸಿದ್ದಾರೆ.
ಮೆಸೇಜಿಂಗ್ ಆ್ಯಪ್ ಟೆಲಿಗ್ರಾಮ್ ಹಾಗೂ ಡಿಜಿಟಲ್ ಪಾವತಿ ಆ್ಯಪ್‌ಗಳಾದ ಪೇಟಿಎಂ ಮತ್ತು ಫೋನ್‌ಪೇಗಳು ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ, ಮಕ್ಕಳ ಮಾರಾಟ ಮತ್ತು ಮಕ್ಕಳ ಮೇಲಿನ ಶೋಷಣೆಯನ್ನು ಅನುಮತಿಸುವ ಪರಿಸರವನ್ನು ನಿರ್ಮಿಸುತ್ತಿವೆ ಎಂದು ಆರೋಪಿಸಿ ಹೈದರಾಬಾದ್ ಮೂಲದ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಸುನೀತಾ ಕೃಷ್ಣನ್ ಪ್ರಕರಣ ದಾಖಲಿಸಿದ್ದಾರೆ.
ಇದನ್ನೂ ಓದಿ: ಚೀನಾದಲ್ಲಿ ಹೈ ಸ್ಪೀಡ್ ಇಂಟರ್‌ನೆಟ್ ಅನಾವರಣ!: ಒಂದು ಸೆಕೆಂಡ್ ಗೆ 100 ಜಿಬಿ ನೆಟ್!
ಟೆಲಿಗ್ರಾಂನಲ್ಲಿ ಮಕ್ಕಳ ಮೇಲಿನ ದೌರ್ಜನ್ಯ ದೃಶ್ಯಗಳು ಅತ್ಯಂತ ಸುಲಭವಾಗಿ ಮಾರಾಟ ಮಾಡಲಾಗುತ್ತಿದೆ. ಇಂಥ ವ್ಯವಹಾರಗಳಿಗೆ ಹಣ ಪಾವತಿಗೆ ಪೇಟಿಎಂ, ಫೋನ್‌ಪೇ ಅವಕಾಶ ಕಲ್ಪಿಸಿವೆ. ಅಪ್ರಾಪ್ತ ವಯಸ್ಸಿನ ಮಕ್ಕಳ ಲೈಂಗಿಕ ಕ್ರಿಯೆಯ ವಿಡಿಯೋಗಳ ಮಾರಾಟ ಮತ್ತು ವಿತರಣೆ ತಡೆಗೆ ಈ ಸಂಸ್ಥೆಗಳು ಯಾವ ಕ್ರಮ ಕೈಗೊಂಡಿವೆ ಎಂಬುದನ್ನು ಬಹಿರಂಗಪಡಿಸಬೇಕು ಎಂದು ಸುನೀತಾ ಆಗ್ರಹಿಸಿದ್ದಾರೆ.