Monday, December 23, 2024

ಜಮೀರ್​ ಹೇಳಿಕೆಗೆ ಗರಂ ಆದ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ!

ಬೆಂಗಳೂರು: ತೆಲಂಗಾಣದಲ್ಲಿ ಚುನಾವಣೆ ಪ್ರಚಾರದ ವೇಳೆ ರಾಜ್ಯದ ಸಚಿವ ಜಮ್ಮೀರ್ ಅಹಮದ್​ ಖಾನ್​ ಬಿಜೆಪಿ ವಿರುದ್ದ ನೀಡಿದ ಹೇಳಿಕೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ‌ರಿಂದ ಖಂಡನೆ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ಸಭಾಧ್ಯಕ್ಷ ಸ್ಥಾನದಲ್ಲಿರುವವರಿಗೆ ನಾವು ಗೌರವ ಕೊಡುತ್ತೇವೆ ಎಂದರೇ ಅದು ಆ ಸ್ಥಾನಕ್ಕೆ ಮತ್ತು ಪ್ರಜಾಪ್ರಭುತ್ವಕ್ಕೆ ಕೊಡುವಂತದ್ದು ಯಾವುದೇ ವ್ಯಕ್ತಿಗಲ್ಲ ಎಂದರು.

ಇದನ್ನೂ ಓದಿ: ಸಚಿವ ಜಮೀರ್ ಅಹ್ಮದ್​​ ಮತ್ತೊಂದು ಎಡವಟ್ಟು!

ಜಮ್ಮೀರ್ ಅಹಮದ್ ಅವ್ರೇ, ನೀವು ಯಾವುದೋ ಒಂದು ಕೋಮಿನ ಜವಬ್ದಾರಿ ತಗೊಂಡಿಲ್ಲ. ಒಬ್ಬ ಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ನೀವು ನಿಮ್ಮ ಅಂತರಾಳದ ಮಾತನ್ನು ಆಡಿದ್ದೀರಿ. ಈ ಹೇಳಿಕೆ ನಿಜಕ್ಕೂ ದುರದೃಷ್ಟಕರ. ಮತ್ತು ಇದನ್ನು ಖಂಡಿಸುತ್ತೇವೆ, ಇನ್ಮುಂದೆ ಈ ರೀತಿ ಮಾತಾಡದಂತೆ ಎಚ್ಚರಿಕೆ ವಹಿಸಿ ಅಂತಾ ಅವರು ಹೇಳಿದರು.

RELATED ARTICLES

Related Articles

TRENDING ARTICLES