Thursday, January 23, 2025

ಪಾಕ್ ನಾಯಕತ್ವಕ್ಕೆ ಬಾಬರ್ ಅಜಂ ರಾಜಿನಾಮೆ!

ICC ODI ವಿಶ್ವಕಪ್ 2023 ರಲ್ಲಿ ನಿರಾಶಾದಾಯಕ ಪ್ರದರ್ಶನದ ನಂತರ, ಪಾಕಿಸ್ತಾನ ತಂಡದಲ್ಲಿ ಕಂಪನ ಶುರುವಾಗಿದೆ. ನಾಯಕ ಬಾಬರ್ ಅಜಂ ಎಲ್ಲಾ ಸ್ವರೂಪಗಳ ನಾಯಕತ್ವದಿಂದ ರಾಜೀನಾಮೆ ನೀಡಿ ಕೆಳಗಿಳಿದ್ದಾರೆ.

ಬಾಬರ್ ರಾಜೀನಾಮೆ ನಂತರ, ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇಬ್ಬರು ವಿಭಿನ್ನ ನಾಯಕರನ್ನು ನೇಮಿಸಿದೆ. ಸ್ಟಾರ್ ವೇಗದ ಬೌಲರ್ ಶಾಹೀನ್ ಅಫ್ರಿದಿಗೆ ಟಿ20 ಮಾದರಿಯ ಕಮಾಂಡ್ ನೀಡಲಾಗಿದ್ದರೆ ಬ್ಯಾಟ್ಸ್‌ಮನ್ ಶಾನ್ ಮಸೂದ್ ಪಾಕಿಸ್ತಾನ ಟೆಸ್ಟ್ ತಂಡದ ಸಾರಥ್ಯ ವಹಿಸಲಿದ್ದಾರೆ. ಪಿಸಿಬಿ ಇನ್ನೂ ಏಕದಿನ ತಂಡದ ನಾಯಕನನ್ನು ಪ್ರಕಟಿಸಿಲ್ಲ.

ಇದನ್ನೂ ಓದಿ: ಪಿಚ್​ ವಿವಾದ: ಟೀಕಗಾರರಿಗೆ ಸುನೀಲ್ ಗವಾಸ್ಕರ್ ತಿರುಗೇಟು!

T20 ನಾಯಕನಾಗಿ ನೇಮಕಗೊಂಡ ನಂತರ ಶಾಹೀನ್ ಅಫ್ರಿದಿ, ಬಾಬರ್ ಅವರನ್ನು ಹೊಗಳಿದ್ದಾರೆ. ಬಾಬರ್ ಆಜಂ, ನಿಮ್ಮ ಆದರ್ಶಪ್ರಾಯ ನಾಯಕತ್ವದಲ್ಲಿ ನಿಜವಾದ ಟೀಮ್‌ವರ್ಕ್ ಮತ್ತು ಸಹೋದರತ್ವವನ್ನು ನೋಡುವುದು ಒಂದು ಸೌಭಾಗ್ಯ ಎಂದು ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಬರೆದಿದ್ದಾರೆ.

RELATED ARTICLES

Related Articles

TRENDING ARTICLES