Monday, December 23, 2024

ಯತೀಂದ್ರ ಲಿಸ್ಟ್​​ ಸೀಕ್ರೆಟ್​ ವಿಡಿಯೋ ಎಡವಟ್ಟು: ವಿಡಿಯೋ ವೈರಲ್!

ಮೈಸೂರು: “ನಾನು ಕೊಟ್ಟಿದ್ದ ಲಿಸ್ಟನ್ನೇ ಕೊಡಿ. ನಾನು ಕೊಟ್ಟಿದ್ದ ಲಿಸ್ಟ್ ನಲ್ಲಿ ಕೇವಲ ನಾಲ್ಕೈದು ಇವೆ. ಇದೇ ಲಿಸ್ಟನ್ನೇ ಕೊಡಿ. ಬೇರೆ ಏನನ್ನೋ ಕೊಡಬೇಡಿ’’. ಹೀಗಂತ, ಸಿಎಂ ಸಿದ್ದರಾಮಯ್ಯನವರ ಪಕ್ಕ ಇದ್ದ ಒಬ್ಬರಿಗೆ, ಸಿದ್ದರಾಮಯ್ಯನವರ ಪುತ್ರ ಡಾ. ಯತೀಂದ್ರ ಸಿದ್ದರಾಮಯ್ಯನವರು ಫೋನಿನಲ್ಲೇ ಆವಾಜ್ ಹಾಕಿರುವ ವಿಡಿಯೋವೊಂದು ನಿಧಾನವಾಗಿ ವೈರಲ್ ಆಗುತ್ತಿದೆ.

ಮೈಸೂರು ತಾಲೂಕಿನ ಕೀಳನಾಪುರ ಎಂದ ಗ್ರಾಮದಲ್ಲಿ ಇತ್ತೀಚೆಗೆ ಏರ್ಪಡಿಸಲಾಗಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಜನರ ಮುಂದೆಯೇ ಅವರು ಹೀಗೆ ಮಾತನಾಡಿರುವುದು ಯಾರದ್ದೋ ಮೊಬೈಲಿನಲ್ಲಿ ಸೆರೆಯಾಗಿದೆ. ಆ ವಿಡಿಯೋ ಈಗ ಒಬ್ಬರಿಂದ ಇನ್ನೊಬ್ಬರಿಗೆ ಹರಡಿ ಅದೀಗ ವೈರಲ್ ಆಗಿದೆ.

ಇದನ್ನೂ ಓದಿ: ಇಂದಿನಿಂದ ನವೆಂಬರ್ 22ರವರೆಗೂ ಮಳೆ ಸಾಧ್ಯತೆ!

ಮೊದಲೇ ಡಾ. ಯತೀಂದ್ರ ಅವರ ಮೇಲೆ ಕೆಲವು ಆರೋಪಗಳು ಕೇಳಿಬಂದಿವೆ. ಸರ್ಕಾರದ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ, ಅವರು ಪ್ರತ್ಯೇಕವಾಗಿ ವೈಎಸ್​​​ಟಿ ಸಂಗ್ರಹಿಸುತ್ತಿದ್ದಾರೆ ಎಂಬ ಆರೋಪಗಳನ್ನು ಈ ಬಾರಿ ಹೊಸ ಸರ್ಕಾರ ರಚನೆಯಾದಾಗಿನಿಂದ ಕೆಲವು ಬಾರಿ ಮಾಡಿದ್ದಾರೆ. ಆದರೆ, ಅದೆಲ್ಲವೂ ಸುಳ್ಳು ಎಂದು ಕಾಂಗ್ರೆಸ್ ಹೇಳುತ್ತಾ ಬಂದಿದೆ. ಆದರೀಗ, ಡಾ.ಯತೀಂದ್ರ ಅವರೇ ಖುದ್ದು ಸಿಎಂ ಹಾಗೂ ಅವರ ಆಪ್ತರೊಬ್ಬರ ಬಳಿ ಹೀಗೆ ಮಾತನಾಡಿರುವುದು ಜನರಲ್ಲಿ ಹೊಸ ಗೊಂದಲ ಸೃಷ್ಟಿಸಿದೆ.

RELATED ARTICLES

Related Articles

TRENDING ARTICLES