Monday, December 23, 2024

ವಿದ್ಯುತ್​​​​ ಕಳ್ಳತನ ಮುಚ್ಚಿ ಹಾಕಲು ಯತೀಂದ್ರನ ಬಗ್ಗೆ ಆರೋಪ : ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಮಾಜಿ ಸಿಎಂ ಆಗಿ ವಿದ್ಯುತ್​​​​ ಕಳ್ಳತನ ಮಾಡಿದ್ದು ತಪ್ಪು ಅಲ್ವಾ? ಇದನ್ನು ಮುಚ್ಚಿಕೊಳ್ಳಲು ಯತೀಂದ್ರ ವಿಡಿಯೋ ಮುಂದಿಟ್ಟುಕೊಂಡು ಆರೋಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

ನಗರದಲ್ಲಿ ಮಾತನಾಡಿದ ಅವರು ಯತೀಂದ್ರ ಎಲ್ಲಿಯಾದರೂ ವರ್ಗಾವಣೆ ವಿಚಾರ ಮಾತಾಡಿದ್ದಾರಾ? ನನ್ನ ರಾಜಕೀಯ ಜೀವನದಲ್ಲಿ ವರ್ಗಾವಣೆಗಾಗಿ ಹಣ ಪಡೆದಿಲ್ಲ. ಹಣ ಪಡೆದಿದ್ದರೆ ರಾಜಕೀಯದಿಂದ ನಿವೃತ್ತಿಯಾಗುವೆ ಎಂದರು.

ರಾಜಕೀಯ ನಿವೃತ್ತಿ

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ದಂಧೆ, ಹಗರಣಗಳಲ್ಲಿ ಭಾಗಿಯಾಗಿಲ್ಲ. ಕುಮಾರಸ್ವಾಮಿ ರಾಜಕೀಯಕ್ಕಾಗಿ ಏನೆಲ್ಲಾ ಆರೋಪ ಮಾಡಬಹುದು, ಮಾಡಿಕೊಳ್ಳಲಿ, ಕುಮಾರಸ್ವಾಮಿ ಆರೋಪಗಳ ಬಗ್ಗೆ ಬೇಕಾದರೆ ತನಿಖೆ ಮಾಡಿಕೊಳ್ಳಲಿ, ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

RELATED ARTICLES

Related Articles

TRENDING ARTICLES