Monday, December 23, 2024

Worldcup Semi Final: ಟಾಸ್​ ಗೆದ್ದ ಸೌತ್​ ಆಫ್ರಿಕಾ ಬ್ಯಾಟಿಂಗ್​ ಆಯ್ಕೆ!

ಕೋಲ್ಕತ್ತ : ವಿಶ್ವಕಪ್​ನ ಎರಡನೇ ಸೆಮಿ ಫೈನಲ್ ಕದನ ಇಂದು ಆಸ್ಟ್ರೇಲಿಯ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವೆ ನಡೆಯಲಿದ್ದು ಈ ಪಂದ್ಯದಲ್ಲಿ ಗೆದ್ದ ತಂಡ ಫೈನಲ್​ ನಲ್ಲಿ ಭಾರತ ತಂಡವನ್ನು ಎದುರಾಗಲಿದೆ.

ಕೋಲ್ಕತ್ತದ ಈಡನ್​ ಗಾರ್ಡನ್​ ನಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಎರಡು ಬಲಿಷ್ಟ ತಂಡಗಳು ಕಾದಾಟ ನಡೆಸಲಿದೆ. ದಕ್ಷಿಣ ಆಫ್ರಿಕಾ ತಂಡದ ನಾಯಕ ತೆಂಬ ಬವುಮಾ ಮತ್ತು ಆಸ್ಟ್ರೇಲಿಯಾದ ಪ್ಯಾಟ್​ ಕಮ್ಮಿನ್ಸ್​ ನಾಯಕತ್ವದಲ್ಲಿ ಈ ಪಂದ್ಯಗಳು ನಡೆಯಲಿದೆ.

ಟಾಸ್​ ಗೆದ್ದ ಸೌತ್​ ಆಫ್ರಿಕಾ:

ವಿಶ್ವಕಪ್​ ನ ಎರಡನೇ ಸೆಮಿ ಫೈನಲ್​ ಪಂದ್ಯದಲ್ಲಿ ಇಂದು ಟಾಸ್ ಗೆದ್ದ ಸೌತ್​ ಆಫ್ರಿಕಾ ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಇನ್ನು ಆಸ್ಟ್ರೇಲಿಯಾ ತಂಡದಲ್ಲಿ ಆಟಗಾರರ ಬದಲಾವಣೆಯಾಗಿದ್ದು ಸ್ಟೋನಿಸ್​ ಮತ್ತು ಸೀನ್ ಆಬಾಟ್​ ಪಂದ್ಯದಿಂದ ಹೊರಗುಳಿದಿದ್ದು ಮ್ಯಾಕ್ಸ್​ವೆಲ್​ ಮತ್ತು ಸ್ಟಾರ್ಕ್​ ಪಂದ್ಯದಲ್ಲಿ ಆಡಲಿದ್ದಾರೆ. ಸೌತ್​ ಆಫ್ರಿಕಾ ತಂಡದಲ್ಲಿ ಕೊಂಚ ಬದಲಾವಣೆಗಳಾಗಿದ್ದು ಲುಂಗಿ ಎನ್ಜಿಡಿ ಬದಲಿಗೆ ತಬ್ರೇಜ್ ಶಂಸಿ ಆಡಲಿದ್ದಾರೆ.

RELATED ARTICLES

Related Articles

TRENDING ARTICLES