Friday, November 22, 2024

Yathindra Siddaramaiah : ಯತೀಂದ್ರ ಸಿದ್ದರಾಮಯ್ಯ ಹೇಳಿದ ಮಹದೇವ್‌ ಯಾರು..?

ಬೆಂಗಳೂರು: ಯತೀಂದ್ರ ಸಿದ್ದರಾಮಯ್ಯ ಅವರು ಸಿದ್ದರಾಮಯ್ಯನವರ ಜೊತೆ ಮಾತನಾಡಿದ ವೀಡಿಯೋ ಇದೀಗ ವೈರಲ್ ಆಗತ್ತಿದೆ.

ಹೌದು,ಯತೀಂದ್ರ ಸಿದ್ದರಾಮಯ್ಯ ಸಿದ್ದ ಮಾಡಿರೋ ಪಟ್ಟಿಯನ್ನು ತಿದ್ದಿದ ಆರೋಪ ಎದುರಿಸುತ್ತಿರುವ ಆರ್‌. ಮಹದೇವ್‌ ಯಾರು ಎಂಬ ಚರ್ಚೆ ಈಗ ದೊಡ್ಡ ಮಟ್ಟದಲ್ಲಿ ನಡೆಯುತ್ತಿದೆ.

ಇದು ಸಿಎಂ ಅವರ ಸಹಿಗಾಗಿ ಕಳುಹಿಸಿದ ವರ್ಗಾವಣೆ ಪಟ್ಟಿ ಇರಬಹುದು ಎಂದು ಅನುಮಾನ ಮೂಡಿದ್ದು, ಇದರಲ್ಲಿ ಹೆಚ್ಚುವರಿ ಹೆಸರು ಸೇರಿಸಿದ್ದಕ್ಕಾಗಿ ಈಗ ಮಹದೇವ್‌ ಸುದ್ದಿಯ ಕೇಂದ್ರ ಬಿಂದುವಾಗಿದ್ದಾರೆ. ಹಾಗಿದ್ದರೆ ಈ ಮಹದೇವ್‌ ಯಾರು?

ಈ ಮಹದೇವ್‌ ಯಾರು..? 

ಡಾ.ಯತೀಂದ್ರ ಸಿದ್ದರಾಮಯ್ಯ ವಿಡಿಯೋದಲ್ಲಿ ಪ್ರಸ್ತಾಪ ಆಗಿರುವ ಮಹದೇವ್ ಯಾರೆಂದರೆ ಅವರು ಮುಖ್ಯಮಂತ್ರಿ ಕಚೇರಿಯ ವಿಶೇಷಾಧಿಕಾರಿ ಆರ್.ಮಹದೇವ್. ಆರ್.ಮಹದೇವ್ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಒಎಸ್‌ಡಿ. ಒಎಸ್‌ಡಿ ಅಂದ್ರೆ ಆಫೀಸರ್ ಆನ್ ಸ್ಪೆಷಲ್ ಡ್ಯೂಟಿ.

ಇದನ್ನೂ ಓದಿ: ಯತೀಂದ್ರ ಲಿಸ್ಟ್​​ ಸೀಕ್ರೆಟ್​ ವೀಡಿಯೋ ಎಡವಟ್ಟು: ವಿಡಿಯೋ ವೈರಲ್!

ಮಹದೇವ್ ಮೂಲತಃ ಸಿದ್ದರಾಮನಹುಂಡಿ ಗ್ರಾಮದವರಾಗಿದ್ದು, ಬೆಂಗಳೂರಿನಲ್ಲಿ ಉಪನೋಂದಣಾಧಿ ಕಾರಿಯಾಗಿದ್ದರು. ಸಿಎಂ ಅವರು ಮುಖ್ಯಮಂತ್ರಿಯಾದ ಬಳಿಕ ಹುಟ್ಟೂರಿನ ಅಧಿಕಾರಿಯನ್ನೇ ಆಯಕಟ್ಟಿನ ಹುದ್ದೆಗೆ ನಿಯೋಜಿಸಿಕೊಂಡಿದ್ದರು.

ಏನಿದು ಹೆಸರು ಸೇರಿಸಿ ಪಟ್ಟಿ ತಿದ್ದಿದ ಆರೋಪ..?

ಮೈಸೂರು ತಾಲೂಕಿನ ಕೀಳನಪುರ ಗ್ರಾಮದಲ್ಲಿ ನಡೆದ ಜನಸಂಪರ್ಕ ಸಭೆಯಲ್ಲಿದ್ದ ವೇಳೆ ಸಿದ್ದರಾಮಯ್ಯ ಅವರಿಂದ ಬಂದ ಫೋನ್‌ ಕರೆಗೆ ಉತ್ತರಿಸುವ ವೇಳೆ ಯತೀಂದ್ರ ಸಿದ್ದರಾಮಯ್ಯ ಎಡವಟ್ಟು ಮಾಡಿಕೊಂಡಿದ್ದಾರೆ. ಸಾರ್ವಜನಿಕರ ಮುಂದೆಯೇ ತಾನು ನೀಡಿದ ಲಿಸ್ಟ್ ಬಗ್ಗೆ ಅವರು ತಂದೆಯ ಜತೆ ಮಾತುಕತೆ ನಡೆಸಿದ್ದರು. ಫೋನ್‌ ಮಾಡಿ ಮಾತನಾಡಿದ ಯತೀಂದ್ರ, ತಾನು ನೀಡಿದ ಲಿಸ್ಟ್​ ಬಗ್ಗೆ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರು ವಿವೇಕಾನಂದರ ಹೆಸರು ಎತ್ತಿದ್ದು, ಇದಕ್ಕೆ ಯಾರು ಎಂದು ಯತೀಂದ್ರ ಅವರು ಪ್ರಶ್ನೆ ಮಾಡಿದ್ದಾರೆ.

ಅಲ್ಲದೆ, ಬೇರೊಂದು ಲಿಸ್ಟ್​ ನೀಡಿದ ಬಗ್ಗೆ ಅಸಮಾಧಾನಗೊಂಡ ಯತೀಂದ್ರ, ನಾನು ಕೊಟ್ಟಿರುವುದೇ ಐದು ಅಂತ ಹೇಳಿ ಮಹದೇವರಿಗೆ‌ ಫೋನ್ ನೀಡುವಂತೆ ಸಿದ್ದರಾಮಯ್ಯಗೆ ಸೂಚಿಸುತ್ತಾರೆ. ಬಳಿಕ ಮಹದೇವ್ ಜೊತೆ ಮಾತನಾಡಿದ ಯತೀಂದ್ರ, ʼಮಹದೇವ್​ ಯಾಕೆ ಯಾವ್ದ್ಯಾವುದು ಕೊಡ್ತಾ ಇದ್ದೀರಿ? ಮತ್ತೆ ಇದೆಲ್ಲ ಯಾರು ಕೊಡ್ತಿರೋದುʼ ಅಂತ ಪ್ರಶ್ನೆ ಮಾಡಿದ್ದಾರೆ. ʼಅದೆಲ್ಲ ಬೇಡ. ನಾನು ಯಾವುದು ನಾಲ್ಕೈದು ಕೊಟ್ಟಿದ್ದೇನೋ ಅಷ್ಟೇ ಮಾತ್ರ ಮಾಡಿʼ ಅಂತ ಯತೀಂದ್ರ ಸೂಚಿಸಿರುವ ವಿಡಿಯೋ ಈಗ ವೈರಾಲ್ ಆಗುತ್ತಿದೆ.

 

 

RELATED ARTICLES

Related Articles

TRENDING ARTICLES