ಮುಂಬೈ: ಕೋಟ್ಯಾಂತರ ಭಾರತೀಯರ ಅದೊಂದು ಕನಸು ನನಸಾಗಿದೆ. ಬರೋಬ್ಬರಿ 12 ವರ್ಷಗಳಿಂದ ಟೀಂ ಇಂಡಿಯಾ ಅಭಿಮಾನಿಗಳು ಕಾಯುತ್ತಿದ್ದ ಕ್ಷಣ ಕೊನೆಗೂ ಸನಿಹವಾಗಿದೆ.
ಟೀಂ ಇಂಡಿಯಾ ವಿಶ್ವವನ್ನು ಗೆಲ್ಲಲು ಕೇವಲ ಇನ್ನೊಂದು ಹೆಜ್ಜೆ ಬಾಕಿ ಇದೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಪಡೆಯನ್ನು 70 ರನ್ಗಳಿಂದ ಮಣಿಸಿದ ಟೀಂ ಇಂಡಿಯಾ 2023 ರ ಏಕದಿನ ವಿಶ್ವಕಪ್ನ ಫೈನಲ್ಗೇರಿದೆ. ಈ ಮೂಲಕ 2019ರ ವಿಶ್ವಕಪ್ನಲ್ಲಿ ಟೀಂ ಇಂಡಿಯಾವನ್ನು ಸೆಮಿಫೈನಲ್ನಲ್ಲಿ ಸೋಲಿಸಿ ಟೂರ್ನಿಯಿಂದ ಹೊರಹಾಕಿದ್ದ ನ್ಯೂಜಿಲೆಂಡ್ಗೆ ರೋಹಿತ್ ಪಡೆ ತಕ್ಕ ಪ್ರತ್ಯುತ್ತರ ನೀಡಿದೆ.
ಇದನ್ನೂ ಓದಿ: ಅಕ್ರಮ ಪಡಿತರ ಸೌಲಭ್ಯ ಪಡೆದವರಿಂದ 1 ಕೋಟಿ ರೂ. ದಂಡ ವಸೂಲಿ!
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಂ ಇಂಡಿಯಾ ವಿರಾಟ್ ಕೊಹ್ಲಿ ಹಾಗೂ ಶ್ರೇಯಸ್ ಅಯ್ಯರ್ ಅವರ ಶತಕದ ನೆರವಿನಿಂದ 50 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 398 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್ ತಂಡ ಡೇರೆಲ್ ಮಿಚೆಲ್ ಅವರ ಏಕಾಂಗಿ ಹೋರಾಟದ ಶತಕದ ಹೊರತಾಗಿಯೂ 48.5 ಓವರ್ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 327 ರನ್ಗಳಿಸಲಷ್ಟೇ ಶಕ್ತವಾಯಿತು.