Sunday, February 23, 2025

ವರ್ಗಾವಣೆ ದಂಧೆ ಸಾಬೀತಾದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಸಿಎಸ್ ಆರ್ ಫಂಡಿಂಗ್ ಬಗ್ಗೆ ನನ್ನ ಪುತ್ರ ಡಾ ಯತೀಂದ್ರ ಪ್ರಸ್ತಾಪಿಸಿದ್ದು,ಆರೋಪ ಸತ್ಯವಾದರೆ ರಾಜಕೀಯ ನಿವೃತ್ತಿ ನೀಡುವೆ ಎಂದು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಡಾ ಯತೀಂದ್ರ ಸಿದ್ದರಾಮಯ್ಯ ಮೊಬೈಲ್ ನಲ್ಲಿ ಮಾತನಾಡಿರುವ ವಿಡಿಯೊ ಮಾಧ್ಯಮಗಳಲ್ಲಿ ತೀವ್ರ ಸುದ್ದಿಯಾಗಿರುವ ಹಿನ್ನಲೇಯಲ್ಲಿ ಪ್ರತಿಕ್ರಿಯಿಸಿರುವ ಶಾಲೆಗಳನ್ನು ಕಟ್ಟಿಸುತ್ತಿದ್ದೇವೆ. ಅದಕ್ಕೆ ಸಿಎಸ್ ಆರ್ ಫಂಡ್ ಒದಗಿಸುವ ಬಗ್ಗೆ ಮಾತನಾಡಿದ್ದಾರೆ ಹೊರತು ವರ್ಗಾವಣೆ ಬಗ್ಗೆ ಅಲ್ಲ ಎಂದರು.

ರಾಜಕೀಯ ನಿವೃತ್ತಿ: 

ನನ್ನ 40 ವರ್ಷಗಳ ರಾಜಕೀಯ ಜೀವನದಲ್ಲಿ ಯಾವುದೇ ದಂಧೆ, ಹಗರಣಗಳಲ್ಲಿ ಭಾಗಿಯಾಗಿಲ್ಲ. ಕುಮಾರಸ್ವಾಮಿ ರಾಜಕೀಯಕ್ಕಾಗಿ ಏನೆಲ್ಲಾ ಆರೋಪ ಮಾಡಬಹುದು, ಮಾಡಿಕೊಳ್ಳಲಿ, ಕುಮಾರಸ್ವಾಮಿ ಆರೋಪಗಳ ಬಗ್ಗೆ ಬೇಕಾದರೆ ತನಿಖೆ ಮಾಡಿಕೊಳ್ಳಲಿ, ಆರೋಪ ಸಾಬೀತಾದರೆ ರಾಜಕೀಯ ನಿವೃತ್ತಿ ತೆಗೆದುಕೊಳ್ಳುತ್ತೇನೆ ಎಂದು ಸವಾಲು ಹಾಕಿದರು.

RELATED ARTICLES

Related Articles

TRENDING ARTICLES