Monday, December 23, 2024

5 ಬಾರಿ ಸೆಮಿಫೈನಲ್ ತಲುಪಿದರೂ ಅಳಿಯಲಿಲ್ಲ ಚೋಕರ್ಸ್ ಪಟ್ಟ : ಹರಿಣಗಳಿಗೆ ವಿಲನ್ ಆದ ಟ್ರಾವಿಸ್ ಹೆಡ್

ಬೆಂಗಳೂರು : ದಕ್ಷಿಣ ಆಫ್ರಿಕಾ ತಂಡದ ಪಾಲಿಗೆ ವಿಶ್ವಕಪ್ ಕನಸು ಕನಸಾಗಿಯೇ ಉಳಿದಿದೆ. ಏಕದಿನ ವಿಶ್ವಕಪ್​ನ ಇತಿಹಾಸದಲ್ಲಿ 5 ಬಾರಿ ಸೆಮಿಫೈನಲ್​ಗೆ ತಲುಪಿದರೂ ಎಲ್ಲಾ ಪಂದ್ಯಗಳಲ್ಲಿ ಹರಿಣಗಳು ಸೋಲು ಕಂಡಿದ್ದಾರೆ.

1992, 1999, 2007, 2015 ಹಾಗೂ ಪ್ರಸಕ್ತ (2023) ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ತಂಡ ಸೆಮಿಫೈನಲ್​ನಲ್ಲಿ ಆಡಿದ್ದು ಕಡಿಮೆ ಅಂತರದಲ್ಲಿ ಎಲ್ಲಾ ಪಂದ್ಯಗಳನ್ನು ಕೈಚೆಲ್ಲಿದೆ. ಈ ಮೂಲಕ ದಕ್ಷಿಣ ಆಫ್ರಿಕಾ ತಂಡ ಚೋಕರ್ಸ್​ ಪಟ್ಟವನ್ನು ತನ್ನಲ್ಲೇ ಉಳಿಸಿಕೊಂಡಿದೆ.

ಹರಿಣಗಳಿಗೆ ಹೆಡ್ ವಿಲನ್

ದಕ್ಷಿಣ ಆಫ್ರಿಕಾ ಗೆಲುವಿಗೆ ಟ್ರಾವಿಸ್ ಹೆಡ್ ಅಕ್ಷರಶಃ ವಿಲನ್ ಆದರು. ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡ ಆರಂಭಿಕ ಆಘಾತ ಕಂಡು ಸ್ವಲ್ಪ ಚೇತರಿಕೆ ಕಂಡಿತು. ಈ ವೇಳೆ ಟ್ರಾವಿಸ್ ಹೆಡ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಪಡೆಯುವ ಮೂಲಕ ಹರಿಣಗಳಿಗೆ ದೊಡ್ಡ ಆಘಾತ ನೀಡಿದರು. ಹೆನ್ರಿಕ್ ಕ್ಲಾಸೆನ್ (47) ಹಾಗೂ ಮಾರ್ಕೊ ಜಾನ್ಸೆನ್ (0) ಅವರನ್ನು ಶೂನ್ಯಕ್ಕೆ ಪೆವಿಲಿಯನ್ ಹಾದಿ ತೋರಿಸಿದರು.

ಬಳಿಕ ಇನ್ನಿಂಗ್ಸ್​ ಆರಂಭಿಸಿದ ಆಸಿಸ್​ಗೆ ಟ್ರಾವಿಸ್ ಹೆಡ್​ ಆಟ ಗೆಲುವಿನ ಭರವಸೆ ಮೂಡಿಸಿತು. ವಾರ್ನರ್ ಜೊತೆ ಟ್ರಾವಿಸ್ ಹೆಡ್ ಮೊದಲ ವಿಕೆಟ್‌ಗೆ 60 ರನ್ ಸೇರಿಸಿದರು. ದಕ್ಷಿಣ ಆಫ್ರಿಕಾ ಬೌಲರ್​ಗಳನ್ನು ಕಾಡಿದ ಹೆಡ್ 62 ರನ್ ಸಿಡಿಸಿ ಔಟಾದರು. ಈ ಮೂಲಕ ಹೆಡ್ ಆಸಿಸ್​ ಪರ ಅತಿ ಹೆಚ್ಚು ರನ್ ಗಳಿಸಿದರು. ಆಲ್​ರೌಂಡರ್​ ಆಟ ಪ್ರದರ್ಶಿಸಿ ಪಂದ್ಯ ಶ್ರೇಷ್ಠ ಪ್ರಶಸ್ತಿಗೂ ಭಾಜನರಾದರು.

ವಿಶ್ವಕಪ್ ಫೈನಲ್‌ಗೆ ಹೆಚ್ಚು ಅರ್ಹತೆ ಪಡೆದ ತಂಡಗಳು

ಆಸ್ಟ್ರೇಲಿಯಾ : 8

ಇಂಗ್ಲೆಂಡ್ : 4

ಭಾರತ : 4

ವೆಸ್ಟ್ ಇಂಡೀಸ್ : 3

ಶ್ರೀಲಂಕಾ : 3

RELATED ARTICLES

Related Articles

TRENDING ARTICLES