ಬೆಂಗಳೂರು: ನಾನು ವಿಡಿಯೊ ನೋಡಿಲ್ಲ, ನನಗೆ ಗೊತ್ತಿಲ್ಲ, ನಾನೇಕೆ ಪ್ರತಿಕ್ರಿಯಿಸಿಲ್ಲ, ಗೊತ್ತಿಲ್ಲದಿರುವ ವಿಷಯ ಬಗ್ಗೆ ಮಾತನಾಡುವುದಿಲ್ಲ ಎಂದು ಹರಕೆಯ ಹೇಳಿಕೆ ನೀಡಿದ್ದಾರೆ.
ಸಿಎಂ ಸಿದ್ದರಾಮಯ್ಯ ಪುತ್ರ ಡಾ ಯತೀಂದ್ರ ಅವರು ಮೊಬೈಲ್ ನಲ್ಲಿ ಮಾತನಾಡಿರುವ ವಿಡಿಯೊ ವೈರಲ್ ಆಗಿರುವ ಸಂದರ್ಭದಲ್ಲಿ ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಉಂಟಾಗಿದೆ ಎಂದು ವಿವಾದ ಎದ್ದಿದ್ದು, ಈ ಬಗ್ಗೆ ಸುದ್ದಿಗಾರರಿಗೆ ಪ್ರತಿಕ್ರಿಯೆ ಕೇಳಿದಾಗ ಗೃಹ ಸಚಿವ ಡಾ ಜಿ ಪರಮೇಶ್ವರ್ ನಿರಾಕರಿಸಿದ್ದಾರೆ.
ಇದನ್ನೂ ಓದಿ: ವರ್ಗಾವಣೆ ದಂಧೆ ಸಾಬೀತಾದರೆ ರಾಜಕೀಯ ನಿವೃತ್ತಿ: ಸಿಎಂ ಸಿದ್ದರಾಮಯ್ಯ
ಸರ್ಕಾರದಲ್ಲಿ ಪ್ರತಿನಿತ್ಯ ನೂರೆಂಟು ವಿಚಾರಗಳು, ಮಾತುಗಳು ನಡೆಯುತ್ತಿವೆ. ನಮ್ಮ ಆಡಳಿತದಲ್ಲಿ ಹತ್ತಾರು ವಿಷಯಗಳಿವೆ. ಅವರು ಯಾವುದೋ ವಿಚಾರ ಬಗ್ಗೆ ಮಾತನಾಡಿರಬಹುದು, ವಿರೋಧ ಪಕ್ಷದವರು ದಿನನಿತ್ಯ ಆರೋಪ ಮಾಡುತ್ತಾರೆ. ಅವರ ಮಾತಿಗೆಲ್ಲಾ ಪ್ರತಿಕ್ರಿಯೆ ನೀಡಲು ಆಗುವುದಿಲ್ಲ ಎಂದರು.
ನಮ್ಮಗೆ ಆಡಳಿತ ನಡೆಸಲು ಜನರು ನಮಗೆ ಅವಕಾಶ ಕೊಟ್ಟಿದ್ದಾರೆ. ಆಡಳಿತ ಮಾಡುತ್ತಿದ್ದೇವೆ, ಜನರಿಗೆ ನೀಡಿದ ಭರವಸೆಗಳನ್ನು ಮುಂದಿಟ್ಟುಕೊಂಡು ಕೆಲಸ ಮಾಡುತ್ತಿದ್ದೇವೆ, ವಿರೋಧ ಪಕ್ಷದವರು ಅವರ ಕೆಲಸ ಮಾಡುತ್ತಿದ್ದಾರೆ ಎಂದರು.