Monday, December 23, 2024

ಸಚಿನ್ ತೆಂಡೂಲ್ಕರ್ ವಿಶ್ವ ಕಪ್​ ದಾಖಲೆ ಉಡೀಸ್ ಮಾಡಿದ ಕಿಂಗ್ ಕೊಹ್ಲಿ

ಮುಂಬೈ: ನ್ಯೂಜಿಲೆಂಡ್ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ಸ್ಟಾರ್ ಆಟಗಾರ ಕಿಂಗ್ ಕೊಹ್ಲಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ.

ಹೌದು, ಒಂದೇ ವಿಶ್ವಕಪ್‌ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಸಚಿನ್ ತೆಂಡೂಲ್ಕರ್ (673) ಅವರನ್ನು ಹಿಂದಿಕೆ ಹಾಕಿ ಕೊಹ್ಲಿ (674*) ಹೊಸ ದಾಖಲೆ ಬರೆದಿದ್ದಾರೆ.

ಪ್ರಸ್ತುತ 80* ಗಳಿಸಿರುವ ಕೊಹ್ಲಿ.. ODI ನಲ್ಲಿ ಸಚಿನ್ ಅವರೊಂದಿಗೆ (49 ಶತಕ) ಸಮಬಲ ಸಾಧಿಸಿದ್ದಾರೆ. ಈ ಒಂದು ದಾಖಲೆ ಮುರಿಯಲು ಕೊಹ್ಲಿಗೆ ಇನ್ನೂ ಕೇವಲ 20 ರನ್ ಗಳ ಅಗತ್ಯವಿದೆ.

ವಿರಾಟ್ ಕೊಹ್ಲಿ 2023ರ ವಿಶ್ವ ಕಪ್​ನಲ್ಲಿ ಒಟ್ಟು 8 ಬಾರಿ 50 ಪ್ಲಸ್ ಸ್ಕೋರ್ ಬಾರಿಸಿದಂತಾಗಿದೆ. ಇದರೊಂದಿಗೆ ಅವರು ಏಳು ಫಿಪ್ಟಿ ಫ್ಲಸ್ ಸ್ಕೋರ್ ಬಾರಿಸಿದ ಸಚಿನ್ ಅವರು ದಾಖಲೆಯನ್ನು ಮುರಿದಿದ್ದಾರೆ. 2019ರ ವಿಶ್ವ ಕಪ್​ನಲ್ಲಿ ಏಳು ಬಾರಿ ಫಿಫ್ಟಿ ಪ್ಲಸ್​ ಸ್ಕೋರ್​ ಮಾಡಿದ್ದರು. 2019ರಲ್ಲಿ ಆರು ಬಾರಿ ಫಿಫ್ಟಿ ಪ್ಲಸ್​ ಸ್ಕೋರ್​ ಬಾರಿಸಿದ ರೋಹಿತ್​ ಶರ್ಮಾ, ಡೇವಿಡ್​ ವಾರ್ನರ್​ ನಂತರದ ಸ್ಥಾನದಲ್ಲಿದ್ದಾರೆ.

ವಿಶ್ವಕಪ್ ಆವೃತ್ತಿಯಲ್ಲಿ ಅತಿ ಹೆಚ್ಚು 50 ಪ್ಲಸ್ ಸ್ಕೋರ್

  • 8- ವಿರಾಟ್ ಕೊಹ್ಲಿ (2023)
  • 7- ಸಚಿನ್ ತೆಂಡೂಲ್ಕರ್ (2003)
  • 7- ಶಕೀಬ್ ಅಲ್ ಹಸನ್ (2019)
  • 6- ರೋಹಿತ್ ಶರ್ಮಾ (2019)
  • 6- ಡೇವಿಡ್ ವಾರ್ನರ್ (2019)

RELATED ARTICLES

Related Articles

TRENDING ARTICLES