Wednesday, January 22, 2025

ದೀಪಾವಳಿ ದಿನದಂದೆ ಬೀದಿ ನಾಯಿಯ ದಾಳಿ: 20 ಮಂದಿ ಆಸ್ಪತ್ರೆ ಪಾಲು!

ದೊಡ್ಡಬಳ್ಳಾಪುರ: ದೀಪಾವಳಿ ಹಬ್ಬದಂದೇ ನಗರದ ವಿವಿಧ ಭಾಗಗಳಲ್ಲಿ ಬೀದಿನಾಯಿಯೊಂದು ಸುಮಾರು 20 ಮಂದಿಗೆ ಕಚ್ಚಿರುವ ಘಟನೆ ನಡೆದಿದೆ.

ಸೋಮವಾರ ರಾತ್ರಿ 09 ಮಂದಿ ಹಾಗೂ ಮಂಗಳವಾರ ಬೆಳಗ್ಗೆ 11 ಮಂದಿಗೆ ನಾಯಿ ಕಡಿತಕ್ಕಳಗಾಗಿದ್ದಾರೆ. ನಗರದ ಕೋರ್ಟ್‌ ರಸ್ತೆಯಲ್ಲಿ, ಜಿ ರಾಮೇಗೌಡ ವೃತ್ತದ ಬಳಿ, ಪ್ರಿಯಾಂಕ ಹೋಟೆಲ್, ಡಿಕ್ರಾಸ್ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ನಾಯಿ ದಾಳಿ ನಡೆಸುತ್ತಿದ್ದು ಸಾರ್ವಜನಿಕರು ಆತಂಕಕ್ಕೀಡಾಗಿದ್ದಾರೆ.

ಇದನ್ನೂ ಓದಿ: ಮನೆಕೆಲಸಕ್ಕಿದ್ದವಳಿಂದ 20 ಲಕ್ಷ ಮೌಲ್ಯದ ಚಿನ್ನ ಕಳ್ಳತನ: ಆರೋಪಿ ಬಂಧನ!

ಈ ಕುರಿತಂತೆ ಸಾರ್ವಜನಿಕರು ದೊಡ್ಡಬಳ್ಳಾಪುರ ನಗರಸಭೆ ಅಧಿಕಾರಿಗಳ ವಿರುದ್ಧ ಕಿಡಿಕಾರಿದ್ದು, ಬೀದಿ ನಾಯಿ ಉಪಟಳದ ಕುರಿತು ಪದೇ ಪದೇ ವರದಿಯಾಗುತ್ತಿದ್ದರು, ಅಧಿಕಾರಿಗಳು ಕ್ರಮ ಕೈಗೊಳ್ಳದೆ ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

RELATED ARTICLES

Related Articles

TRENDING ARTICLES