Monday, December 23, 2024

ಮಂಗಗಳ ದಾಳಿಗೆ ಪಿಎಲ್​ಡಿ ಬ್ಯಾಂಕ್ ಉಪಾಧ್ಯಕ್ಷ ಸಾವು!

ದಾವಣಗೆರೆ: ಮಂಗಗಳ ದಾಳಿಗೆ ಪಿಎಲ್​ಡಿ ಬ್ಯಾಂಕ್ ಉಪಾಧ್ಯಕ್ಷ ಸಾವನ್ನಪ್ಪಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲೂಕಿನ ಅರಕೆರೆ ಗ್ರಾಮದಲ್ಲಿ ನಡೆದಿದೆ.

ಗುತ್ತೆಪ್ಪ ಮೃತ ದುರ್ದೈವಿ. ಗುತ್ತೆಪ್ಪ ಅವರು ನಿನ್ನೆ ಮುಂಜಾನೆ ಮನೆಯಿಂದ ಹೊರಬಂದಾಗ ಏಕಾಏಕಿಯಾಗಿ ಮಂಗಗಳು ದಾಳಿ ನಡೆಸಿವೆ. ಮಂಗಗಳ ದಾಳಿಯಿಂದ ಗುತ್ತೆಪ್ಪ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.

ಇದನ್ನೂ ಓದಿ: ಮಹಿಳೆಯರಿಗೆ ಸಿಹಿಸುದ್ದಿ: ಶಕ್ತಿ ಯೋಜನೆಯ ಪ್ರಯಾಣ ಮತ್ತಷ್ಟು ಸುಲಭ!

ಮಾಹಿತಿ ತಿಳಿದು ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ಎಂಪಿ ರೇಣುಕಾಚಾರ್ಯ, ಗುತ್ತೆಪ್ಪ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದ ನಂತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಇದೇ ವೇಳೆ ಸ್ಥಳೀಯರೊಂದಿಗೆ ಮಾತನಾಡಿದ ರೇಣುಕಾಚಾರ್ಯ ಅವರಿಗೆ ಅರಕೆರೆ ಗ್ರಾಮದಲ್ಲಿ ಕರಡಿ, ಚಿರತೆ, ಮಂಗಗಳ ಕಾಟದ ಬಗ್ಗೆ ಮಾಹಿತಿ ನೀಡಲಾಯಿತು. ಅದರಂತೆ, ಅರಣ್ಯ ಅಧಿಕಾರಿಗಳ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲು ಸೂಚಿಸುವುದಾಗಿ ರೇಣುಕಾಚಾರ್ಯ ಅವರು ಗ್ರಾಮಸ್ಥರಿಗೆ ಭರವಸೆ ನೀಡಿದರು.

RELATED ARTICLES

Related Articles

TRENDING ARTICLES