Wednesday, January 22, 2025

ಒಂದು ಓವರ್​​ನಲ್ಲಿ 6 ವಿಕೆಟ್​ ಪಡೆದು ಸಾಧನೆ​​!

ಆಸ್ಟ್ರೇಲಿಯಾದ ಗೋಲ್ಡ್‌ ಕೋಸ್ಟ್‌ನ ಮೂರನೇ ಡಿವಿಷನ್‌ ಕ್ರಿಕೆಟ್‌ ಕ್ಲಬ್‌ವೊಂದರ ಬೌಲರ್, ಒಂದು ಓವರ್‌ನ ಆರೂ ಎಸೆತಗಳಲ್ಲಿ ವಿಕೆಟ್ ಪಡೆದು ಅಪರೂಪದ ಸಾಧನೆ ಮಾಡಿದ್ದಾರೆ.

ಮಡ್ರಬಾ ನೆರಾಂಗ್ ಮತ್ತು ಡಿಸ್ಟ್ರಿಕ್ಟ್ ಕ್ರಿಕೆಟ್ ಕ್ಲಬ್ ತಂಡದ ನಾಯಕ ಗ್ಯಾರೆತ್ ಮಾರ್ಗನ್ ಅವರು ಗೋಲ್ಡ್ ಕೋಸ್ಟ್ ಪ್ರೀಮಿಯರ್ ಲೀಗ್ ಮೂರನೇ ಡಿವಿಷನ್ ಟೂರ್ನಿಯಲ್ಲಿ ಶನಿವಾರ ಸರ್ಫಸ್ ಪ್ಯಾರಡೈಸ್ ಕ್ರಿಕೆಟ್ ಕ್ಲಬ್ ಎದುರಿನ ಪಂದ್ಯದಲ್ಲಿ ಈ ದಾಖಲೆಗೆ ಭಾಜನರಾದರು ಎಂದು ಎಬಿಸಿ.ನೆಟ್.ಎಯು ವರದಿ ಮಾಡಿದೆ.

ಇದನ್ನೂ ಓದಿ: ಮಂಗಗಳ ದಾಳಿಗೆ ಪಿಎಲ್​ಡಿ ಬ್ಯಾಂಕ್ ಉಪಾಧ್ಯಕ್ಷ ಸಾವು!

178 ರನ್‌ಗಳ ಗುರಿ ಬೆನ್ನಟ್ಟಿದ ಸರ್ಫಸ್ ತಂಡ 39 ಓವರ್‌ಗಳಲ್ಲಿ 4 ವಿಕೆಟ್‌ಗೆ 174 ರನ್‌ ಗಳಿಸಿತ್ತು. 40 ಓವರ್‌ಗಳ ಈ ಪಂದ್ಯದ ಅಂತಿಮ ಓವರ್‌ನಲ್ಲಿ ತಂಡದ ಜಯಕ್ಕೆ 4 ರನ್‌ಗಳ ಅಗತ್ಯವಿತ್ತು. ಆದರೆ ಮಾರ್ಗನ್ ಅವರು ಕೊನೆಯ ಓವರ್‌ನ ಎಲ್ಲ ಎಸೆತಗಳಲ್ಲೂ ವಿಕೆಟ್ ಪಡೆದು ಮಡಬಾ ತಂಡಕ್ಕೆ ರೋಚಕ ಗೆಲುವು ತಂದಿತ್ತರು.

https://www.abc.net.au/news/2023-11-14/captain-takes-six-wickets-in-final-over-to-seal-win/103101746?utm_campaign=abc_news_web&utm_content=link&utm_medium=content_shared&utm_source=abc_news_web

RELATED ARTICLES

Related Articles

TRENDING ARTICLES