Wednesday, January 22, 2025

BBK Season 10 : ವರ್ತೂರ್ ಸಂತೋಷ್​ ಕನ್ವಿನ್ಸ್ ಮಾಡಲು ಬಿಗ್‌ಬಾಸ್‌ ಮನೆಗೆ ಭಾಗ್ಯಲಕ್ಷ್ಮೀ’ ಎಂಟ್ರಿ

ಬೆಂಗಳೂರು: ವರ್ತೂರ್‌ ಸಂತೋಷ್‌ ಅವರ ವಿಚಾರವಾಗಿ ಸುದೀಪ್‌ ಬೇಸರಗೊಂಡಿದ್ದಾರೆ. ಈ ವಾರ ವರ್ತೂರ್‌ ಸಂತೋಷ್‌ ಅವರು ನಾಮಿನೇಟ್‌ ಕೂಡ ಆಗಿದ್ದರು. ಆದರೆ ಬರೋಬ್ಬರಿ 34,15, 472 ಮತಗಳು ಬಂದು ಸೇಫ್‌ ಆಗಿದ್ದಾರೆ. ಆದರೆ ವರ್ತೂರ್‌ ಅವರು ಕಿಚ್ಚನ ಮುಂದೆ ಮನೆಯಿಂದ ಹೊರ ಹೋಗುವ ತೀರ್ಮಾನ ಮಾಡಿರುವುದಾಗಿ ಹೇಳಿದ್ದಾರೆ.

ಕಿಚ್ಚ ಸುದೀಪ್‌ ಅವರು ಎಷ್ಟೇ ಕನ್ವಿನ್ಸ್‌ ಮಾಡಿದರೂ ವರ್ತೂರ್‌ ಕೇಳುವ ಪರಿಸ್ಥಿತಿಯಲ್ಲಿರಲಿಲ್ಲ. ವರ್ತೂರ್‌ ಅವರ ಈ ನಡೆಗೆ ಪ್ರೇಕ್ಷಕರು ಕೂಡ ಬೇಸರಗೊಂಡಿದ್ದಾರೆ.

ನನಗೆ ಹೊರಗೆ ನಡೆದ ಘಟನೆಯನ್ನು ಮರೆತು ಆಡಬೇಕು ಎಂದು ಇಲ್ಲಿಗೆ ಬಂದೆ. ಆದರೆ ನನಗೆ ಅದರಿಂದ ಹೊರಗೆ ಬರಲು ಸಾಧ್ಯಾಗುತ್ತಿಲ್ಲ. ಹಾಗಾಗಿ ನಾನು ಶೋಯಿಂದ ಹೊರಗೆ ಹೋಗಲು ಬಯಸುತ್ತೇನೆ’ ಎಂದು ಹೇಳಿದರು. ಇದರಿಂದ ಎಲ್ಲರಿಗೂ ಶಾಕ್ ಆಗಿದೆ.

ಕಿಚ್ಚಕೂಡ, ‘ನೀವು ಜನರ ಪ್ರೀತಿಯ ವಿರುದ್ಧ ಹೋಗ್ತಿದ್ದೀರಾ’ ಎಚ್ಚರಿಸಿದರು. ಕೊನೆಯಲ್ಲಿ, ‘ಮನೆಯೊಳಗೆ ಇರ್ತೀರೋ ಬಿಡ್ತೀರೋ ನಿಮಗೆ ಬಿಟ್ಟಿದ್ದು. ಆದರೆ ನನಗಂತೂ ಡಿಸಪಾಯಿಂಟ್ ಆಗಿದೆ’ ಎಂದು ಹೇಳಿ ಬೇಸರದಿಂದಲೇ ವೇದಿಕೆ ಬಿಟ್ಟು ಹೊರನಡೆದರು.

ಇದೀಗ ವರ್ತೂರು ಸಂತೋಷ್ ಅವರನ್ನು ಮನೆಯೊಳಗೆ ಉಳಿದುಕೊಳ್ಳುವಂತೆ ಮನವೊಲಿಸಲು ಇಡೀ ಮನೆಯ ಸದಸ್ಯರೆಲ್ಲರೂ ಪ್ರಯತ್ನಿಸುತ್ತಿದ್ದಾರೆ.ಇದೇ ಹೊತ್ತಿನಲ್ಲಿ ಬಿಗ್‌ಬಾಸ್‌ ಮನೆಗೆ ಮತ್ತೊಬ್ಬರು ಗೆಸ್ಟ್ ಎಂಟ್ರಿ ಕೊಟ್ಟಿದ್ದಾರೆ.

ಬಿಗ್‌ಬಾಸ್ ಮನೆಯ ಬಾಗಿಲು ತೆರೆಯುತ್ತಿದ್ದ ಹಾಗೆಯೇ ಜನಪ್ರಿಯ ಧಾರಾವಾಹಿ ನಟಿ, ಕಲರ್ಸ್‌ ಕನ್ನಡದಲ್ಲಿ ಪ್ರಸಾರವಾಗುತ್ತಿರುವ, ‘ಭಾಗ್ಯಲಕ್ಷ್ಮಿ’ಯ ಮುಖ್ಯಪಾತ್ರದಲ್ಲಿ ನಟಿಸುತ್ತಿರುವ ಸುಷ್ಮಾ ಕೆ ರಾವ್ ಬಿಗ್‌ಬಾಸ್ ಮನೆಯೊಳಗೆ ಪ್ರವೇಶಿಸಿದ್ದಾರೆ.

ಹಾಗಾದರೆ ಈ ಎಂಟ್ರಿ ದೀಪಾವಳಿ ಸಂಭ್ರಮದ ಭಾಗವೇ? ಸುಷ್ಮಾ ದಿರಿಸೇನೋ ಹಬ್ಬದ ಸಂಭ್ರಮವನ್ನು ಪ್ರತಿನಿಧಿಸುವ ಹಾಗೆಯೇ ಇದೆ. ಆದರೆ ಅವರು ಮನೆಯೊಳಗೆ ತೆರಳಿ ಹೋಗಿದ್ದು ನೇರವಾಗಿ ವರ್ತೂರ್ ಸಂತೋಷ್ ಬಳಿಗೆ ಹೋಗಿ ಮಾತನಾಡಿದ್ದಾರೆ.

‘ನಾನು ನಿಮ್ಮ ಅಕ್ಕ ಆಗಿ ಹೇಳ್ತಿದೀನಿ. ನನ್ನಿಂದ ಆಗಲ್ಲ ಅನ್ನೋದನ್ನು ಮನಸಿಂದ ತೆಗೆದುಬಿಡಿ’ ಎಂದು ಪಕ್ಕಕೂತು ಕನ್ವಿನ್ಸ್ ಮಾಡುತ್ತಿರುವುದು JioCinema ಬಿಡುಗಡೆ ಮಾಡಿರುವ ಬೆಳಗಿನ ಪ್ರೊಮೊದಲ್ಲಿ ಜಾಹೀರಾಗಿದೆ.
ಹಾಗಾದ್ರೆ ಸುಷ್ಮಾ ವಿವೇಕದ ಮಾತುಗಳಿಗೆ ವರ್ತೂರ್ ತಲೆಬಾಗುತ್ತಾರಾ? ಮನೆಯೊಳಗೇ ಉಳಿದುಕೊಳ್ಳಲು ನಿರ್ಧರಿಸುತ್ತಾರಾ? ತಮಗೆ ವೋಟ್ ಮಾಡಿದ ಮೂವತ್ನಾಲ್ಕು ಲಕ್ಷಕ್ಕಿಂತ ಅಧಿಕ ಜನರ ಮನಸ್ಸಿಗೆ ನೆಮ್ಮದಿ ತರುತ್ತಾರಾ? ಎಲ್ಲಾ ಪ್ರಶ್ನೆಗಳಿಗೆ ಉತ್ತರ ಇಂದಿನ ಸಂಚಿಕೆಯಲ್ಲಿ ತಿಳಿಯುತ್ತದೆ.

 

RELATED ARTICLES

Related Articles

TRENDING ARTICLES