Tuesday, January 28, 2025

ಶಾಲಾ ಮಕ್ಕಳಿಗೆ ಶೂ ಬದಲು ಚಪ್ಪಲಿ ಭಾಗ್ಯ!: ಪೋಷಕರು ಆಕ್ರೋಶ

ಗದಗ: ಜಿಲ್ಲೆಯ ಹಲವು ಶಾಲಾ ಮಕ್ಕಳಿಗೆ ಶೂ ಭಾಗ್ಯ ಬದಲು ಚಪ್ಪಲಿ ಭಾಗ್ಯ ಕರುಣಿಸಲಾಗಿದೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ಆದೇಶವನ್ನೇ ದಿಕ್ಕರಿಸಿ ಶೂ ಬದಲಿಗೆ ಚಪ್ಪಲಿ ನೀಡಿದ್ದಾರೆ. ಸರ್ಕಾರದ ವಿರುದ್ಧ ಪೋಷಕರು ಆಕ್ರೋಶ ಹೊರಹಾಕಿದ್ದಾರೆ.

ಶೂ, ಸಾಕ್ಸ್, ಯೂನಿಫಾರಂ ಹಣ ಗುಳುಂ ಮಾಡಿ ಶೂ ಭಾಗ್ಯ ಕರುಣಿಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರದ ಸರ್ಕಾರಿ ಪ್ರೌಢ ಶಾಲೆ, ಬಸ್ತಿಬಣದಲ್ಲಿನ ಶಾಲೆ, ಕೆಂಚಲಾಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗಳಲ್ಲಿ ಚಪ್ಪಲಿ ವಿತರಣೆ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ: ಫೊಟೊ ಶೂಟ್ ವಿಚಾರಕ್ಕೆ ಜಗಳ: ಯುವಕನ ಕೊಲೆ!

ಹಲವು ಶಾಲೆಗಳ ಮಕ್ಕಳಿಗೆ ಶೂ ಕೊಟ್ಟು ಕೆಲ ಶಾಲೆಗಳಲ್ಲಿ ಚಪ್ಪಲಿ ನೀಡಲಾಗಿದೆ. ಈ ಕುರಿತು ಪೋಷಕರು ಪ್ರಶ್ನೆ ಮಾಡಿದರೆ ಶಾಲಾ ಆಡಳಿತ ಮಂಡಳಿ ಬೇರೆಯದ್ದೇ ಸಮಜಾಯಿಷಿ ನೀಡಿದೆ. ಒಬ್ಬ ಮಗನಿಗೆ ಶೂ ಭಾಗ್ಯ, ಇನ್ನೊಬ್ಬ ಮಗನಿಗೆ ಚಪ್ಪಲಿ ಭಾಗ್ಯ ದೊರೆತಿದ್ದು, ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಶಿಕ್ಷಣ ಇಲಾಖೆ ಅಚಾತುರ್ಯಕ್ಕೆ ಸರ್ಕಾರಿ ಶಾಲೆ ಮಕ್ಕಳು ಬೇಸರ ಹೊರಹಾಕಿದ್ದಾರೆ.

RELATED ARTICLES

Related Articles

TRENDING ARTICLES