Monday, December 23, 2024

ನಮ್ಮ ಪಕ್ಷ ಎಂದೂ ಒಂದೇ ಜಾತಿಗೆ ಸೀಮಿತವಾಗಿಲ್ಲ : ಸಚಿವ ದಿನೇಶ್ ಗುಂಡೂರಾವ್

ಬೆಂಗಳೂರು : ನಮ್ಮ ಪಕ್ಷ ಎಂದೂ ಒಂದು ಜಾತಿಗೆ ಸೀಮಿತವಾಗಿಲ್ಲ ಎಲ್ಲಾ ಸಮುದಾಯಗಳ ಜೊತೆಯೂ ಕಾಂಗ್ರೆಸ್ ಇದೆ ಎಂದು ಸಚಿವ ದಿನೇಶ್​​ ಗುಂಡೂರಾವ್​ ಹೇಳಿದ್ದಾರೆ.

ಬೆಂಗಳೂರಲ್ಲಿ ಮಾತನಾಡಿದ ಅವರು, ವಿಜಯೇಂದ್ರ ಬಿಜೆಪಿ ಅಧ್ಯಕ್ಷರಾದ ಕಾರಣ ಲಿಂಗಾಯತ ಸಮುದಾಯ ಪಕ್ಷದಿಂದ ದೂರ ಹೋಗೋದಿಲ್ಲ. ಇದರ ಭಯವೂ ನಮಗೆ ಇಲ್ಲ ಎಂದು ಹೇಳಿದ್ದಾರೆ.

ಜೆಡಿಎಸ್​​ಗೆ ಜಾತಿ ಅನಿವಾರ್ಯವಾಗಿದೆ ಅದೇ ಕಾರಣಕ್ಕೆ ಜಾತಿಯನ್ನು ಮುಂದಿಟ್ಟುಕೊಂಡು ಹೋಗುತ್ತಿದ್ದಾರೆ. ಮಾಜಿ ಸಿಎಂ H.D.ಕುಮಾರಸ್ವಾಮಿಗೆ ಜಾತಿ ಅಸ್ತ್ರ ಬಿಟ್ಟರೆ ಬೇರೆ ಏನೂ ಇಲ್ಲ.ಬಿಜೆಪಿಗೂ ಈಗ ಅದೇ ಪರಿಸ್ಥಿತಿ ಬಂದಂತಿದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಕುಮಾರಸ್ವಾಮಿಗೆ ಜಾತಿ ಅಸ್ತ್ರ ಬಿಟ್ಟರೆ ಬೇರೆ ಏನೂ ಇಲ್ಲ : ದಿನೇಶ್ ಗುಂಡೂರಾವ್ ವ್ಯಂಗ್ಯ

ಜಾತಿ, ದುಡ್ಡಿನಿಂದ ಗೆಲ್ಲಬಹುದೆಂದು ಅಂದುಕೊಂಡಿದ್ದಾರೆ ನಮ್ಮ ಪಕ್ಷದಲ್ಲೂ ಒಕ್ಕಲಿಗ, ಲಿಂಗಾಯತ ಸಮುದಾಯದವರು ಪ್ರಮುಖ ಸ್ಥಾನದಲ್ಲಿ ಇದ್ದಾರೆ. ಡಿಸಿಎಂ ಡಿ.ಕೆ.ಶಿವಕುಮಾರ್​ ಒಕ್ಕಲಿಗ ಸಮುದಾಯದ ನಾಯಕರಾಗಿದ್ದಾರೆ.

M.B.ಪಾಟೀಲ್​ ಲಿಂಗಾಯತ ಸಮುದಾಯದ ಪ್ರಚಾರ ಸಮಿತಿ ಅಧ್ಯಕ್ಷರಾಗಿದ್ದಾರೆ. ಈಶ್ವರ್ ಖಂಡ್ರೆ KPCC ಕಾರ್ಯಾಧ್ಯಕ್ಷರಾಗಿದ್ದಾರೆ. ಈ ಹಿಂದೆ ನಾವು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಎಂಪಿ ಚುನಾವಣೆ ಎದುರಿಸಿದ್ದೆವು. ಆಗ ಜೆಡಿಎಸ್ ಜೊತೆ ಹೋದಾಗ ಏನಾಯ್ತು ಹೇಳಿ.ಈಗ ಬಿಜೆಪಿ ಜೊತೆ ಜೆಡಿಎಸ್ ಹೋದರೆ ಏನಾಗಲಿದೆ ಅನ್ನೋದನ್ನ ಕಾದು ನೋಡಲಿ ಎಂದು ಟಾಂಗ್ ನೀಡಿದ್ದಾರೆ.

 

RELATED ARTICLES

Related Articles

TRENDING ARTICLES